ಭಾರತೀಯ ನೌಕಾಪಡೆ ದಿನ : ಗಣ್ಯರಿಂದ ಶುಭಾಶಯ – Vishwanews24
ಭಾರತೀಯ ನೌಕಾಪಡೆ ದಿನ : ಗಣ್ಯರಿಂದ ಶುಭಾಶಯ – Vishwanews24
ನವದೆಹಲಿ, : ಭಾರತೀಯ ನೌಕಾಪಡೆ ದಿನದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಪ್ರಧಾನಿ ನರೇಂದರರ ಮೋದಿ, ರಕ್ಷಣ ಸಚಿವ ರಾಜನಾಥ್ ಸಿಂಗ್ ಹಾಗೂ ಹಲವು ಮಂದಿ ಶುಭ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಕೋರಿದ ರಾಷ್ಟ್ರಪತಿ, “ನೌಕಾಪಡೆಯ ದಿನದಂದು ನಮ್ಮ ನೌಕಾಪಡೆಯ ಸಿಬ್ಬಂದಿಗೆ, ನಿವೃತ್ತ ಹಿರಿಯ ಸಿಬ್ಬಂದಿಗಳು ಸೇರಿದಂತೆ ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳು. ನಮ್ಮ ಕಡಲ ಗಡಿನಾಡುಗಳನ್ನು ರಕ್ಷಿಸುವಲ್ಲಿ, ನಮ್ಮ ವ್ಯಾಪಾರ ಮಾರ್ಗಗಳನ್ನು ಭದ್ರಪಡಿಸುವಲ್ಲಿ ಹಾಗೂ ನಾಗರಿಕ ತುರ್ತು ಸಂದರ್ಭಗಳಲ್ಲಿ ಸಹಾಯವನ್ನು ನೀಡುವಲ್ಲಿ ನಿಮ್ಮ ಬದ್ಧತೆಯ ಬಗ್ಗೆ ರಾಷ್ಟ್ರ ಹೆಮ್ಮೆಪಡುತ್ತದೆ” ಎಂದಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, “ನಮ್ಮ ಎಲ್ಲಾ ಶೌರ್ಯ ನೌಕಾಪಡೆಯ ಸಿಬ್ಬಂದಿ ಹಾಗೂ ಅವರ ಕುಟುಂಗಳಿಗೆ ನೌಕಾಪಡೆ ದಿನದ ಶುಭಾಶಯಗಳು. ಭಾರತೀಯ ನೌಕಾಪಡೆಯು ನಮ್ಮ ಕರಾವಳಿಯನ್ನು ನಿರ್ಭಯವಾಗಿ ರಕ್ಷಿಸುತ್ತದೆ ಹಾಗೂ ಅಗತ್ಯವಾದ ಸಮಯದಲ್ಲಿ ಮಾನವೀಯ ನೆರವು ನೀಡುತ್ತದೆ” ಎಂದು ಹೇಳಿದ್ದಾರೆ.\
Navy Day greetings to all our valorous navy personnel and their families. The Indian navy fearlessly protects our coasts and also renders humanitarian assistance in times of need. We also remember India’s rich maritime tradition over centuries. pic.twitter.com/k2PMgvc0F3
— Narendra Modi (@narendramodi) December 4, 2020
“ನೌಕಾಪಡೆ ದಿನದ ಈ ಸಂದರ್ಭ ನೌಕಾಪಡೆಯ ಸಿಬ್ಬಂದಿಗಳಿಗೆ ನನ್ನ ಶುಭಾಶಯಗಳು. ಅವರ ಶೌರ್ಯ, ಧೈರ್ಯ ಹಾಗೂ ವೃತ್ತಿಪರತೆಗೆ ನನ್ನ ವಂದನೆಗಳು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, “ನಮ್ಮ ರಾಷ್ಟ್ರವನ್ನು ರಕ್ಷಿಸುವ ನಮ್ಮ ಕೆಚ್ಚೆದೆಯ ನೌಕಾಪಡೆಯ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ನನ್ನ ಶುಭಾಶಯಗಳು” ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವೀಟ್ ಮಾಡಿದ್ದು, “ನೌಕಾಪಡೆ ಯೋಧರ ಸೇವೆ, ತ್ಯಾಗ ಮತ್ತು ಬಲಿದಾನದಿಂದಾಗಿ ಭಾರತ ಸುರಕ್ಷಿತ ಹಾಗೂ ಸುಭದ್ರವಾಗಿದೆ. ಭಾರತೀಯ ನೌಕಾದಳ ದಿನದ ಶುಭಾಶಯಗಳು” ಎಂದಿದ್ದಾರೆ.
