ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಯಶಸ್ವಿ ಸಾಧಿಸಿದ ಇಸ್ರೋ ; ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2 -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು:  ಶ್ರೀ ಹರಿಕೋಟಾದಿಂದ ಜು. 22 ರಂದು ನಭಕ್ಕೆ ಚಿಮ್ಮಿದ ಚಂದ್ರಯಾನ 2 ನೌಕೆ ಚಂದ್ರನ ಕಕ್ಷೆ ಪ್ರವೇಶಿಸಿದೆ.ಉಡಾವಣೆ ಮಾಡಿದ 28 ದಿನಗಳ ಬಳಿಕ ಮಂಗಳವಾರ ಬೆಳಗ್ಗೆ 9.02ಕ್ಕೆ ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರ್ಪಡೆಗೊಳಿಸಲಾಯಿತು ಎಂದು ಇಸ್ರೋ ಹೇಳಿದೆ.

ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯ ಮಾಡಿತ್ತು ಇದೊಂದು ಕಷ್ಟದ ಕೆಲಸ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್​ ತಿಳಿಸಿದ್ದಾರೆ.

ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ. ಚಂದ್ರನ ಪ್ರಭಾವಳಿಯನ್ನು ಪ್ರವೇಶಿಸಿದ ಬಳಿಕ ಈ ಭಾಹ್ಯಾಕಾಶ ನೌಕೆ ತನ್ನ ಚಲನೆಯ ವೇಗವನ್ನು ಕುಂಠಿತಗೊಳಿಸುತ್ತಾ, ಚಂದ್ರನ ಗುರುತ್ವಾಕರ್ಷಣೆಗೆ ಒಳಗಾಗುವಂತೆ ಮಾಡಲಾಗುತ್ತದೆ. ಬಳಿಕ ಚಂದ್ರನ ಕಕ್ಷೆಯು 100 ಕಿ.ಮೀ ಸುತ್ತ ಈ ಬಾಹ್ಯಕಾಶ ನೌಕೆ ಚಲಿಸುವಂತೆ ಮಾಡಲು ಐದು ಹಂತದ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.ಲ್ಯಾಂಡರ್​ ಅನ್ನು ಚಂದ್ರನಿಗೆ ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎರಡು ಬಾರಿ ಅದರ ಕಕ್ಷೆಯ ಎತ್ತರವನ್ನು ಎತ್ತರಿಸಲಾಗುವುದು. ಸೆ.7ರಂದು ಅದನ್ನು ಚಂದಾಮಾಮನ ಅಂಗಳದ ಮೇಲೆ ಇಳಿಸಲಾಗುವುದು ಎಂದು ಇಸ್ರೋ ತಿಳಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಪಗ್ರಹ ಉಡಾವಣಾ ನೆಲೆಯಿಂದ ಚಂದ್ರಯಾನ-2 ಉಪಗ್ರಹವನ್ನು ಜಿಎಸ್​ಎಲ್​ವಿ ಮಾರ್ಕ್​ 3 ಉಡಾಹಕದ ಮೂಲಕ ಜು.22ರಂದು ಉಡಾವಣೆ ಮಾಡಲಾಗಿತ್ತು. ಮೊದಲಿಗೆ ಉಪಗ್ರಹವನ್ನು ಭೂ ಕಕ್ಷೆಯಲ್ಲಿರಿಸಿ, ಹಂತ ಹಂತರವಾಗಿ ಕಕ್ಷೆಯನ್ನು ಎತ್ತರಿಸಿ, ಇದೀಗ ಚಂದ್ರನ ಕಕ್ಷೆಗೆ ರವಾನಿಸಲಾಗಿದೆ.