Featured

ಭಾರತೀಯ ಸೇನೆಗೆ ಪ್ರಧಾನಿ ಮೋದಿಯಿಂದ ಭರ್ಜರಿ ಗಿಫ್ಟ್ ; ಬೆಚ್ಚಿಬಿದ್ದ ಪಾಕಿಸ್ತಾನ ಸೇನೆ

ಬಿರು ಬಿಸಿಲು ಒಂದು ಕಡೆಯಾದರೆ ಮತ್ತೊಂದು ಕಡೆ ಪಾಕಿಸ್ತಾನದಿಂದ ಭಾರತವನ್ನ ರಕ್ಷಿಸುವ ಮಹತ್ತರವಾದ ಜವಾಬ್ದಾರಿ ಭಾರತೀಯ ಸೇನೆಯದ್ದಾಗಿದೆ. ಗುಜರಾತಿನ ಮರಿಭೂಮಿಯಲ್ಲಿ ಗಡಿ ಕಾಯುವ ಸೈನಿಕರಿಗಾಗಿ ಸ್ವಾತಂತ್ರ್ಯಾನಂತರದ ಹಲವು ದಶಕಗಳೇ ಕಳೆದಿದ್ದರೂ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿರಲಿಲ್ಲ. ಆದರೆ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಜೀ ಅಧಿಕಾರ ಸ್ವೀಕರಿಸಿದ ತಕ್ಷಣ ಕೈಗೊಂಡ ಕ್ರಮವೆಂದರೆ ಹಿಂದೆ ಒಂಟೆಗಳ ಮೂಲಕ ನೀರು ತರಬೇಕಿದ್ದ ಸ್ಥಿತಿಯನ್ನ ಬದಲಿಸಿ ನರ್ಮದಾ ನದಿಯ ಮೂಲಕ ಭಾರತೀಯ ಸೇನೆಗೆ ನೀರುಣಿಸುವ ಮಹತ್ತರವಾದ ಕಾರ್ಯವನ್ನ ಮಾಡಿ ಭಾರತೀಯ ಸೇನೆಯ ಪಾಲಿಗೆ ಆಧುನಿಕ ಭಗೀರಥ ಎನಿಸಿಕೊಂಡಿದ್ದರು.

ನಂತರ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಜೀ ಭಾರತೀಯ ಸೇನೆಗೆ ಬಲ ತುಂಬುವ ಹಾಗು ಮಾನಸಿಕ ಆತ್ಮಸ್ಥೈರ್ಯವನ್ನೂ ತುಂವುವ ಕೆಲಸ ಮಾಡುತ್ತ ಸೇನೆಗೆ ಬೇಕಿರುವ ಪ್ರತಿಯೊಂದು ಸೌಲಭ್ಯಗಳನ್ನೂ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಹಳೆಯ ರೈಫಲ್‌ಗಳು, ಮಿಸೈಲ್‌ಗಳು, ಆಧುನಿಕ ಶಸ್ತ್ರಾಸ್ತ್ರಗಳನ್ನೇ ಇಟ್ಟುಕೊಂಡು ಪಾಪಿ ಪಾಕಿಸ್ತಾನ, ಭಯೋತ್ಪಾದಕರು, ಚೀನಾದ ವಿರುದ್ಧ ಸೆಣೆಸುತ್ತಿದ್ದ ಭಾರತೀಯ ಸೇನೆಗೆ ಮೋದಿಜೀ ಆಶಾಕಿರಣವಾಗಿ ಬಂದು ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮಿಸೈಲ್‌ಗಳು, ಯುದ್ಧ ವಿಮಾನಗಳನ್ನ ನೀಡಿ ಸೇನೆಯ ಆತ್ಮಸ್ಥೈರ್ಯ ಹಾಗು ಬಲವನ್ನ ನೂರ್ಮಡಿಗೊಳಿಸಿದ್ದರು.

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹಾಗು ಲಾಲ್‌ಬಹದ್ದೂರ್ ಶಾಸ್ತ್ರೀಜೀ ಯನ್ನ ಬಿಟ್ಟರೆ ಯುದ್ಧಭೂಮಿಯಲ್ಲಿ ಅಥವ ಸೇನಾನೆಲೆಗಳಲ್ಲಿ ಭಾರತೀಯ ಸೇನೆಯ ಕುಂದುಕೊರತೆಗಳನ್ನ ಕೇಳಲು ಯಾವ ಪ್ರಧಾನಿಯೂ ಹೋಗಿರಲಿಲ್ಲ ಆದರೆ ನರೇಂದ್ರ ಮೋದಿಜೀ ಮಾತ್ರ ದೀಪಾವಳಿಯಂದು ರಜೆ ತೆಗೆದುಕೊಂಡು ಆರಾಮಾಗಿ ಮನೇಲಿರಬಹುದೆಂದು ಯೋಚನೆ ಮಾಡದೆ ಸೈನಿಕರ ಜೊತೆ ದೀಪಾವಳಿ ಆಚರಿಸಿ ಬಂದದ್ದು ನಮಗೆಲ್ಲಾ ತಿಳಿದ ವಿಷಯವೇ.

ಭಾರತೀಯ ಸೇನೆ ಈ ಹಿಂದೆಂದಿಗಿಂತಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಬಲಿಷ್ಟವಾಗಿದೆ. ಸೈನಿಕರಿಗೆ ಬುಲೆಟ್‌ಪ್ರೂಫ್ ಜಾಕೆಟ್, ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಒಂದು ಶ್ರೇಣಿ ಒಂದು ಪಿಂಚಣಿ (OROP- One Rank One Pension) ಯೋಜನೆಯನ್ನೂ ಜಾರಿಗೊಳಿಸಿ ಮಾಜಿ ಸೈನಿಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದರು. ಇದೇ ಕಾರಣಕ್ಕೋ ಏನೋ ನರೇಂದ್ರ ಮೋದಿಜೀ ಎಂದರೆ ಭಾರತೀಯ ಸೈನಿಕರಿಗೆ ಎಲ್ಲಿಲ್ಲದ ಅಭಿಮಾನ,‌ ಪ್ರೀತಿ.

ಈಗ ಭಾರತೀಯ ಸೇನೆಗೆ ಮೋದಿಜೀ ನೀಡಿದ್ದಾರೆ ಮತ್ತೊಂದು ಮಹತ್ವದ ಗಿಫ್ಟ್:

ಸೈನಿಕರ ಈ ಕಷ್ಟವನ್ನ ಅರಿತಿರುವ ಪ್ರಧಾನಿ ಮೋದಿ ಭಾರತೀಯ ಸೈನಿಕರಿಗಾಗಿ ಮಹತ್ವದ ಯೋಜನೆಯೊಂದನ್ನ ಜಾರಿಗೆ ತರಲು ಮುಂದಾಗಿದ್ದಾರೆ. ಪ್ರಧಾನಿ ಮೋದಿಯವರ ಈ ಯೋಜನೆ ಗಡಿ ಕಾಯುವ ಬಿಎಸ್‌ಎಫ್ (ಬಾರ್ಡರ್ ಸೆಕ್ಯೂರಿಟಿ ಫೋರ್ಸ್) ಯೋಧರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ರಾಜಸ್ಥಾನದ ಜೋಧಪುರ್, ಜೈಸಲ್ಮೇರ್ ಹಾಗು ಬಾಢಮೇರ್ ದಂತಹ ಮರುಭೂಮಿ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಬಿಸಿಲಿನ ತಾಪ 50 ಡಿಗ್ರಿ ಸೆಂಟಿಗ್ರೇಡ್ ಗೆ ಏರಿಬಿಟ್ಟಿರುತ್ತದೆಯಂತೆ. ಇದರ ಹೊರತಾಗಿಯೂ ಭಾರತೀಯ ಸೇನೆಯ ಬಿಎಸ್‌ಎಫ್ ಯೋಧರು ದೇಶದ ಸುರಕ್ಷತೆಗಾಗಿ ಬಿರಿಬಿಸಿಲಿನಲ್ಲಿ ಗಡಿ ಕಾಯುತ್ತಾರೆ

ಇಲ್ಲಿಯವರೆಗೆ ಇಂತಹ ಬಿರುಬಿಸಿಲಿನ ಗಡಿ ಪ್ರದೇಶಗಳಿರುವ ಜಾಗಗಳಲ್ಲಿ ‘ಅಬ್ಸರ್ವೇಷನ್ ಪೋಸ್ಟ್’ ಗಳು ಇರುತ್ತಿದ್ದವು. ಇವುಗಳಿಂದ ಸೈನಿಕರಿಗೆ ಕೊಂಚ ಮಟ್ಟಿನ ರಲೀಫ್ ಸಿಗುತ್ತಿತ್ತು. ಆದರೆ ಈಗ ಮೋದಿ ಸರ್ಕಾರ ಈ ಅಬ್ಸರ್ವೇಷನ್ ಪೋಸ್ಟ್ ಗಳನ್ನ ಏರ್‌ಕಂಡೀಷನ್ ಗಳಾಗಿ ಪರಿವರ್ತಿಸಲು ಮುಂದಾಗಿದ್ದಾರೆ.

ಗಂಟೆಗಳ ಕಾಲ ಮರುಭೂಮಿಯಲ್ಲಿ ಗಡಿ ಕಾಯುವ ಸೈನಿಕರಿಗೆ ಸಿಗಲಿದೆ ಈ ಸೌಲಭ್ಯ:

ರಾಜಸ್ಥಾನದ ಜೈಸಲ್ಮೇರ್ ನಿಂದ ಪಾಕಿಸ್ತಾನದ ಕುಕೃತ್ಯಗಳ ಮೇಲೆ ಕಣ್ಣಿಡಲು ಭಾರತೀಯ ಸೇನೆಯ ಬಿಎಸ್‌ಎಫ್ ಯೋಧರು ಭೀಕರ ಬಿರು ಬಿಸಿಲಿನಲ್ಲೂ ಹದ್ದಿನ ಕಣ್ಣಿಟ್ಟು ಗಡಿ ಕಾಯ ಬೇಕಾದ ಪರಿಸ್ಥಿತಿಯಿದೆ. ಗಡಿಯಲ್ಲಿನ ಸೈನಿಕರ ಈ ಸಮಸ್ಯೆಗೆ ಇದೀಗ ಮುಕ್ತಿ ಕಾಣಿಸಲು ಪ್ರಧಾನಿ ಮೋದಿ ಇದೀಗ ಸೈನಿಕರಿಗೆ ಏರ್‌ಕಂಡೀಷನ್ ಸೌಲಭ್ಯ ಒದಗಿಸಲಿದ್ದಾರೆ.

ಅಬ್ಸರ್ವೇಷನ್ ಪೋಸ್ಟ್‌ ಗಳನ್ನ ಏರ್‌ಕಂಡೀಷನ್ ಮಾಡಿಸುವುದರಿಂದ ಭಾರತೀಯ ಸೇನೆಯ ಸೈನಿಕರಿಗೆ ಇದೀಗ ಬಿರುಬಿಸಿಲಿನಲ್ಲಿ ಗಂಟೆಗಟ್ಟಲೆ ಗಡಿ ಕಾಯುವ ಕೆಲಸ ಹಾಗು ತಮ್ಮ ಆರೋಗ್ಯದ ರಕ್ಷಣೆಯೂ ಸುಲಭದಾಯಕವಾಗಲಿದೆ. ಸುದ್ದಿ ಮೂಲಗಳ ಪ್ರಕಾರ ಗಡಿಯಲ್ಲಿನ ಇಂತಹ ಕ್ಷೇತ್ರಗಳಲ್ಲಿ ಮೂರು ಕಿಲೋಮೀಟರ್‌ಗೊಂದರಂತೆ ಒಂದು ಅಬ್ಸರ್ವೇಷನ್ ಪೋಸ್ಟ್ ಗಳನ್ನ ಸ್ಥಾಪಿಸಲು ನಿರ್ಧರಿಸಲಿದ್ದು ಇವುಗಳೆಲ್ಲ ಏರ್‌ಕಂಡೀಷನ್ ಸೌಲಭ್ಯ ಹೊಂದಿರಲಿವೆ.

ಬಿರುಬಿಸಿಲಿರುವ ಮರುಭೂಮಿಯ ಸ್ಥಳಗಳಲ್ಲಿ ಸಾಮಾನ್ಯವಾಗಿ ಬಿಸಿಲು 50 ಡಿಗ್ರಿ ತಲುಪಿಬಿಡುತ್ತದೆ, ಮೇ ತಿಂಗಳಿನಲ್ಲಂತೂ ಇನ್ನೂ ಹೆಚ್ಚಾದರೂ ಆಶ್ಚರ್ಯಪಡಬೇಕಿಲ್ಲ ಡಂಬ ಪರಿಸ್ಥಿತಿ ಮರುಭೂಮಿ ಪ್ರದೇಶಗಳಲ್ಲಿದೆ. ಇಂತಹ ವಿಷಮ ಪರಿಸ್ಥಿಯನ್ನ ಎದುರಿಸಲು ಭಾಎತೀಯ ಸೈನಿಕರಿಗೆ ನಿರಂತರವಾಗಿ ನಿಂಬೆ ಹಣ್ಣಿನ ಪಾನಕ ಹಾಗು ಗ್ಲೂಕೋಸ್‌ನ್ನ ನೀಡಲಾಗುತ್ತಿರುತ್ತದೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಸೈನಿಕರ ಶಿಫ್ಟ್ ಬದಲಾಗುವುದರಿಂದ ಸೈನಿಕರು ಅನಾರೋಗ್ಯದಿಂದ ಬಳಲುವುದನ್ನ ತಪ್ಪಿಸಲಾಗುವಂತ ವ್ಯವಸ್ಥೆಯಿದೆ. ಇದರ ಜೊತೆ ಜೊತೆಗೆ ಭಾರತೀಯ ಸೇನೆಯ ಸೈನಿಕರು ಡೆಸರ್ಟ್ ಸ್ಕೂಟರ್(ಮರುಭೂಮಿಯಲ್ಲಿ ಚಲಿಸುವ ಬೈಕ್) ಕೂಡ ಗಡಿ ಸರ್ವೇಕ್ಷಣೆ ಕಾರ್ಯಕ್ಕಾಗಿ ಮಾಡಬೇಕಾಗುತ್ತದೆ.

ಬಿರುಬಿಸಿಲಿನಿಂದ ಕಣ್ಣುಗಳನ್ನ ರಕ್ಷಿಸಿಕೊಳ್ಳಲು ಕಣ್ಣಿಗೆ ಕೂಲಿಂಗ್ ಗ್ಲಾಸ್, ಒಂದು ಬಾಟಲಿಯಲ್ಲಿ ನೀರು ಹಾಗು ತಲೆಗೆ ಟೋಪಿ ಹಾಕಿಕೊಳ್ಳುವುದು ಗಡಿ ಕಾಯುವ ಸೈನಿಕರ ದಿನನಿತ್ಯದ ಕಾರ್ಯವಾಗಿದೆ. ಇಂತಹ ಪ್ರದೇಶಗಳಲ್ಲಿ‌ನ ಅಬ್ಸರ್ವೇಷನ್ ಪೋಸ್ಟ್ ಗಳಲ್ಲಿ ಏರ್‌ಕಂಡೀಷನ್ ಅಳವಡಿಸಿರುವ ಮೋದಿ ಸರ್ಕಾರದ ಕಾರ್ಯಕ್ಕೆ ಸೈನಿಕರು ಖುಷ್ ಆಗಿದ್ದು ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.

 

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

11 hours ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

1 day ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

1 day ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

1 day ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

2 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

2 days ago