ಭಾರತ ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿ ಶುಭಕೋರಿದ ಪ್ರಧಾನಿ ಮೋದಿ
ನವದೆಹಲಿ: ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು ಪ್ರಧಾನಿ ಮೋದಿ ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿಯೊಂದಿಗೆ ಬೆಳಕಿನ ಹಬ್ಬ ಆಚರಿಸಿದರು.
ಉತ್ತರಾಖಂಡದ ಹರ್ಸಿಲ್ ಗ್ರಾಮಕ್ಕೆ ಭೇಟಿ ನೀಡಿ ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿ, ಅತಿ ಎತ್ತರದ ಹಿಮಾವೃತ ಪ್ರದೇಶಗಳಲ್ಲಿ ತಮ್ಮ ಕರ್ತವ್ಯವನ್ನು ಭಕ್ತಿಯಿಂದ ಮಾಡುವ ಇವರಿಂದಲೇ ದೇಶದ ಶಕ್ತಿ ಹೆಚ್ಚುತ್ತಿದೆ ಮತ್ತು 125 ಕೋಟಿ ಭಾರತೀಯರ ಕನಸುಗಳ ಭದ್ರವಾಗಿದೆ ಎಂದರು..
Uttarakhand: Prime Minister Narendra Modi with Jawans of the Indian Armed Forces at Harsil, earlier today. pic.twitter.com/YW0m6YAbTb
— ANI (@ANI) November 7, 2018
ಬೆಳಕಿನ ಹಬ್ಬ ದೀಪಾವಳಿ ಭಯವನ್ನು ಹೋಗಲಾಡಿಸಿ ಒಳ್ಳೆಯ ಬೆಳಕು ನೀಡಲಿ. ಸೈನಿಕರ ಶಿಸ್ತು ಜನತೆಯಲ್ಲಿ ಭಯವನ್ನು ಹೋಗಲಾಡಿಸಿ ಭದ್ರತೆಯನ್ನು ಮೂಡಿಸುವಲ್ಲಿ ನೆರವಾಗಲಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ದೀಪಾವಳಿ ದೀಪಗಳ ಹಬ್ಬವಾಗಿದ್ದು ನಾವು ಒಳ್ಳೆತನವನ್ನು ಹಂಚಿ ಭಯವನ್ನು ದೂರ ಮಾಡಬೇಕು ಎಂದ ಅವರು, ಯೋಧರು ತಮ್ಮ ಕರ್ತವ್ಯದಿಂದ ಜನರಲ್ಲಿ ಭದ್ರತೆ ನೀಡುವುತ್ತಿರುವುದರ ಜತೆ ನಿರ್ಭಯದಿಂದ ಜೀವನ ಮಾಡುವಂತಾಗಿದೆ ಎಂದರು.
ನಾನು ಗುಜರಾತಿನ ಮುಖ್ಯಮಂತ್ರಿಯಾದಾಗಿನಿಂದಲೂ ದೀಪಾವಳಿ ಹಬ್ಬದ ದಿನ ಯೋಧರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಕಳೆದ ವರ್ಷದ ದೀಪಾವಳಿ ಸಂಭ್ರಮವನ್ನು ಹಂಚಿಕೊಂಡರು. ಯೋಧರ ಭೇಟಿ ವೇಳೆ ಮೋದಿ ಅವರಿಗೆ ಸಿಹಿ ವಿತರಿಸಿದರು.
ಸೈನಿಕರಿಗೆ ಸಿಹಿ ಹಂಚಿ ಸಂವಾದ ನಡೆಸಿದ ಪ್ರಧಾನಿ, ಮಾಜಿ ಯೋಧರ ಕಲ್ಯಾಣಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.


