ಭಾರತ ಪ್ರಗತಿ ಪ್ರಮಾಣದೊಂದಿಗೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ : ಅಮಿತ್ ಶಾ -Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ಭಾರತದ ಒಟ್ಟಾರೆ ಆರ್ಥಿಕತೆಯ ಮುಖ್ಯ ಸ್ಥಂಭಗಳು ಸಾಕಷ್ಟು ಸಶಕ್ತವಾಗಿರುವುದರಿಂದ ದೇಶದ ಅರ್ಥವ್ಯವಸ್ಥೆ ಸದ್ಯ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೊಂಡಿದ್ದಾರೆ.

‘2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಮೊದಲು ಬಂದಾಗ ದೇಶದ ಅರ್ಥವ್ಯವಸ್ಥೆ ದುಸ್ಥಿತಿಯಲ್ಲಿತ್ತು” ಎಂದು ಗುಜರಾತ್ ನ ಗಾಂಧಿನಗರದ ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಶಾ ಹೇಳಿದರು.

‘ಆದರೆ ಇಂದು 2019ರಲ್ಲಿ ಭಾರತ ಶೇ.7ರಷ್ಟು ಪ್ರಗತಿ ಪ್ರಮಾಣದೊಂದಿಗೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ” ಎಂದು ಶಾ ಹೇಳಿಕೊಂಡರು.

ಕಳೆದ ಐದು ವರ್ಷಗಳಲ್ಲಿ ಸರಕಾರ ಹಣದುಬ್ಬರ ಪ್ರಮಾಣವನ್ನು ಶೇ.3ಕ್ಕಿಂತಲೂ ಕಡಿಮೆಯಿರುವಂತೆ ನೋಡಿಕೊಳ್ಳಲು ಸಮರ್ಥವಾಗಿದ್ದು, ವಿತ್ತೀಯ ಕೊರತೆ ಶೇ. 5ರಿಂದ ಶೇ. 3.5ಗೆ ಇಳಿದಿದೆ ಎಂದು ಅವರು ಹೇಳಿದರು. ಆರ್ಥಿಕತೆಯ ಕುರಿತಂತೆ ಭಾರತ ಮೂರನೇ ಅತ್ಯಂತ ಮುಂದುವರಿದ ರಾಷ್ಟ್ರವಾಗಬೇಕೆಂದು ಪ್ರಧಾನಿ ಮೋದಿ ಹೇಳಿರುವುದುರಿಂದ ಸರಕಾರ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ,” ಎಂದು ಶಾ ಹೇಳಿದರು.