ಕೋಲಾರ: ವರ್ಷಧಾರೆಯ ನಡುವೆ ಕೋಲಾರ ಎಪಿಎಂಸಿಯಲ್ಲಿ ಟೊಮ್ಯಾಟೊ ಆವಕ ತೀವ್ರ ಕುಸಿತ ಕಂಡಿದ್ದು, ಪರಿಣಾಮ ಟೊಮ್ಯಾಟೊ ದರ ಗಗನಕ್ಕೇರಿದೆ.
ಒಂದು ತಿಂಗಳಿಂದ ತೇವಾಂಶ ಹೆಚ್ಚಾಗಿ ಟೊಮ್ಯಾಟೊ ಇನ್ನಿತರ ತರಕಾರಿಗಳಿಗೆ ರೋಗಬಾಧೆ ಹೆಚ್ಚಾಗಿ ಬೆಳೆ ನಷ್ಟವಾಗಿದೆ.
ಇಳುವರಿಯಕಲ್ಲೂ ತೀವ್ರ ಕುಸಿತ ಕಂಡುಬಂದಿದೆ. ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆ ಹಾನಿಗೀಡಾಗಿದೆ. ಜಿಟಿಜಿಟಿ ಮಳೆಗೆ ಇಳುವರಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೋಲಾರ ಎಪಿಎಂಸಿಗೆ ತರಕಾರಿಗಳ ಆವಕ ತೀರಾ ಕಡಿಮೆ ಆಗಿದೆ.
ಶುಕ್ರವಾರ ಕೋಲಾರದಲ್ಲಿ ಗುಣಮಟ್ಟದ ಟೊಮ್ಯಾಟೊ 15 ಕೆಜಿ ಬಾಕ್ಸ್ ಒಂದರ ಬೆಲೆ 1500 ರೂಪಾಯಿ ದಾಟಿದ್ದರೆ ಕೇವಲ ಒಂದೇ ಒಂದು ಲಾಟ್ ಪ್ರತಿ ಬಾಕ್ಸ್ಗೆ 2000 ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿದೆ. ಇನ್ನು ಚಿಲ್ಲರೆ ಅಂಗಡಿಗಳಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 140 ರೂಪಾಯಿ ದಾಟಿದೆ.
10,000-12,000 ಕ್ವಿಂಟಾಲ್ ಟೊಮ್ಯಾಟೊ ಆವಕವಾಗುತ್ತಿದ್ದ ಮಾರುಕಟ್ಟೆಯಲ್ಲಿ ಶುಕ್ರವಾರ ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಅಂದರೆ 4664 ಕ್ವಿಂಟಾಲ್ನಷ್ಟು ಆವಕವಾಗಿತ್ತು. ಗುಣಮಟ್ಟದ ಟೊಮ್ಯಾಟೊ ಬಾಕ್ಸ್ 1,500 ರೂಪಾಯಿಗೆ ಮೇಲ್ಪಟ್ಟು ಹರಾಜಾದರೆ, ಕೆಆರ್ಎಸ್ ಮಂಡಿಯಲ್ಲಿ 20 ಬಾಕ್ಸ್ ಇದ್ದ ಒಂದು ಲಾಟ್ 2000 ರೂ.ಗೆ ಹರಾಜು ಕಂಡಿದೆ.
ಕೆಲವು ಮಂಡಿಗಳಲ್ಲಿ ಮಾಲೀಕರು ಸ್ಪರ್ಧೆಯ ಮೇಲೆ ಹರಾಜು ಕೂಗುವುದರಿಂದ ಒಂದು ಲಾಟ್ ದಾಖಲೆ ಬೆಲೆಗೆ ಹರಾಜಾಗಿದೆ. ಆವಕ ಕಡಿಮೆ ಇದ್ದುದರಿಂದ ಸರಾಸರಿ 1500 ರೂ.ಗೆ ಹರಾಜು ಕಾಣುತ್ತಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…