ಭಾರೀ ಮಳೆ ಹಿನ್ನೆಲೆ : ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಕ್ಕೆ ಬಂದ ಅಂಗಡಿಯವರಿಗೆ ಸಂಕಷ್ಟ – vishwanews24

Featured, ದಕ್ಷಿಣ ಕನ್ನಡ

ಭಾರೀ ಮಳೆ ಹಿನ್ನೆಲೆ : ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಕ್ಕೆ ಬಂದ ಅಂಗಡಿಯವರಿಗೆ ಸಂಕಷ್ಟ

ಕಡಬ: ಡಿ 5 ರಂದು ಸಂಜೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಸುರಿದಿದ್ದು ಷಷ್ಠಿ ಮಹೋತ್ಸವಕ್ಕೆ ಬಂದ ಅಂಗಡಿಯವರು ಸಂಕಷ್ಟಕ್ಕೆ ಬಿದ್ದಿದ್ದಾರೆ.

ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಅಂಗಡಿಯವರು ಬಾಡಿಗೆ ನೆಲೆಯಲ್ಲಿ ಸ್ಥಳ ಪಡೆದಿದ್ದಾರೆ. ಇಂದು ಸುಮಾರು ಎರಡು ಗಂಟೆಗಳ ಕಾಲ ಮಳೆ ಬಂದ ಕಾರಣ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಕೆಲ ಅಂಗಡಿಗಳಲ್ಲಿ ನೀರು ನಿಂತಿದೆ.

ಮಂಗಳೂರು: ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ;  ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು – vishwanews24

ಸೆಟ್ ಮಾಡಿದ ಆಟಿಕೆಗಳನ್ನು ಮತ್ತೆ ಮುಚ್ಚಿ ಇಡಬೇಕಾದ ಪರಿಸ್ಥಿತಿ ಬಂದಿದೆ. ಕೆಲ ವಸ್ತುಗಳು ನೀರಿನಲ್ಲಿ ಒದ್ದೆಯಾಗಿರುವುದಾಗಿ ವರದಿಯಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ ಅಂಗಡಿಗಳು ಸಂಕಷ್ಟಕ್ಕೆ ಬಿದ್ದಿವೆ. ಅಂಗಡಿ ಸುತ್ತ, ಅಥವಾ ಅಂಗಡಿಯ ಅಡಿ ಭಾಗಕ್ಜೆ ಸಣ್ಣ ಜಲ್ಲಿ ಸುರಿದಾದರು ತಾತ್ಕಾಲಿಕ ವ್ಯವಸ್ಥೆಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಸುಳ್ಯದಲ್ಲಿಯೂ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದ್ದು ರಥಬೀದಿ ರಸ್ತೆ ಕೆಸರುಮಯವಾಗಿದೆ.

ಫೆಂಗಲ್ ಚಂಡಮಾರುತ ಇಫೆಕ್ಟ್| ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ:ಸಂಚಾರಿ  ವ್ಯಾಪಾರಿಗಳಿಗೆ ಸಂಕಷ್ಟ

Leave a Reply