ಭೀಕರ ಅಪಘಾತ : ಲಾರಿಗೆ ಕಾರು ಡಿಕ್ಕಿ ಮಗು ಸೇರಿ ಒಂದೇ ಕುಟುಂಬದ ಐವರ ದುರ್ಮರಣ -Vishwanews24
ತಿರುನಲ್ವೇಲಿ: ಇಂದು ನಸುಕಿನ ಜಾವ ಮುಂಬದಿಯಿಂದ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮಗು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ತಿರುನಲ್ವೇಲಿಯಿಂದ ತೆಂಗಾಶಿ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕಾರು ಲಾರಿಯ ಕೆಳಗೆ ನುಗ್ಗಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅರ್ಧ ಲಾರಿಯ ಕೆಳಭಾಗದಲ್ಲಿ ಸೇರಿಕೊಂಡಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಿಲುಕಿರುವ ಮೃತದೇಹಗಳನ್ನು ಹಾರೆ, ಕೊಡಲಿ ಬಳಸಿ ಹೊರತೆಗೆಯಲಾಗಿದೆ.
