ಭೀಕರ ರಸ್ತೆ ಅಪಘಾತ ; ನಾಲ್ವರ ದುರ್ಮರಣ

Featured, ರಾಜ್ಯ ನ್ಯೂಸ್

ಬೆಂಗಳೂರು: ಓಮ್ನಿಗೆ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ದೇವನಹಳ್ಳಿ ತಾಲೂಕಿನ ಕನ್ನಮಂಗಲಪಾಳ್ಯ ಬಳಿ ನಡೆದಿದೆ.

ಮಧ್ಯರಾತ್ರಿ ಸುಮಾರು 1.30ಗಂಟೆಗೆ ಅಪಘಾತ ಸಂಭವಿಸಿದ್ದು, ಓಮ್ನಿಯಲ್ಲಿದ್ದ ಸುಂದರ್(25), ಸತೀಶ್(24), ವೆಂಕಟೇಶ್(28)​​, ವಿಕಾಸ್​​(23) ಮೃತರು. ಮೃತರೆಲ್ಲ ಬೆಂಗಳೂರು ನಿವಾಸಿಗಳಾಗಿದ್ದು, ಫ್ಲವರ್ ಡೆಕೋರೇಶನ್​ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಹೇಮಂತ್​, ಅಜಿತ್​, ರವಿ ಹಾಗೂ ಇನ್ನೋವಾ ಕಾರಿನಲ್ಲಿದ್ದ ಅವಿನಾಶ್​, ಮನೋಜ್​, ಹಿಂದೂಧರ್​, ಮಧು ಎಂಬುವವರು ಗಾಯಗೊಂಡಿದ್ದು, ಅವರನ್ನು ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತನ ಜನ್ಮದಿನದ ಪಾರ್ಟಿ ಮುಗಿಸಿ ಓಮ್ನಿಯಲ್ಲಿ ನಂದಿಹಿಲ್ಸ್​ ರಸ್ತೆಯಲ್ಲಿ ಬರುತ್ತಿದ್ದಾಗ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

vishwanews24