ವಾಷಿಂಗ್ಟನ್,: ವರ್ಚುವಲ್ ಸ್ಪೇಸ್‍ಸೂಟ್‍ನಲ್ಲಿ ಅದ್ಭುತ ನಕ್ಷತ್ರಪುಂಜಗಳ ನಡುವೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಡುವ ವಿನೂತನ ಆಯಪ್ ಇದೀಗ ಲಭ್ಯವಿದೆ. ವಿಶ್ವದ ಅಗ್ರಗಣ್ಯ ಬಾಹ್ಯಾಕಾಶ ಸಂಸ್ಥೆಗಳಲ್ಲೊಂದಾದ ‘ನಾಸಾ’ ಇದನ್ನು ಬಿಡುಗಡೆ ಮಾಡಿದೆ. ಸೌರಮಂಡಲದ ವಿವಿಧ ಸ್ಥಳಗಳಲ್ಲಿ ಅಂದರೆ ‘ಒರಿಯನ್ ನೆಬುಲಾ’ ಅಥವಾ ಸೌರಮಂಡಲದ ಮಧ್ಯಭಾಗದಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡ ಅನುಭವವನ್ನು ಇದು ನೀಡುತ್ತದೆ.
NASA Selfies ಹೆಸರಿನ ಈ ಆಯಪ್ ಜತೆಗೆ, ಅಮೆರಿಕದ ಈ ಬಾಹ್ಯಾಕಾಶ ಸಂಸ್ಥೆ ಎಕ್ಸೋಪ್ಲಾನೆಟ್ ಎಕ್ಸ್‍ಕರ್‍ಷನ್ಸ್ ವರ್ಚುವಲ್ ರಿಯಾಲಿಟಿ (ವಿಆರ್) ಎಂಬ ಆಯಪ್ ಕೂಡಾ ಬಿಡುಗಡೆ ಮಾಡಿದೆ. ಇದು ವಿಆರ್ ಬಳಕೆದಾರರನ್ನು ಟ್ರಾಪಿಸ್ಟ್-1 ಗ್ರಹಮಂಡಲದಲ್ಲಿ ಮಾರ್ಗದರ್ಶನ ಸಹಿತ ಯಾನ ಕೈಗೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಸ್ಪಿಟ್ಸರ್ ಬಾಹ್ಯಾಕಾಶ ಟೆಲೆಸ್ಕೋಪ್‍ಗೆ ಚಾಲನೆ ನೀಡಿದ 15ನೇ ವರ್ಷಾಚರಣೆಗಾಗಿ ಈ ಡಿಜಿಟಲ್ ಉತ್ಪನ್ನಗಳನ್ನು ಸೃಷ್ಟಿಸಲಾಗಿದೆ ಎಂದು ನಾಸಾ ಹೇಳಿದೆ.
ಸೆಲ್ಫಿ ಆಯಪ್‍ನ ಸರಳ ಇಂಟರ್‍ಫೇಸ್, ನೀವು ಫೋಟೊ ಕ್ಲಿಕ್ಕಿಸಿಕೊಂಡು, ನಿಮ್ಮ ಆಯ್ಕೆಯ ಹಿನ್ನೆಲೆಯನ್ನು ಸೃಷ್ಟಿಸಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಐಒಎಸ್ ಮತ್ತು ಆಯಂಡ್ರಾಯ್ಡ್ ಡಿವೈಸ್ ಗಳಿಗೆ ಈ ಆಯಪ್ ಲಭ್ಯವಿದೆ.
ಕೌಟುಂಬಿಕ ಕಲಹ : ಕೊಲೆಯಲ್ಲಿ ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…
ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…
ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…
ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು ಹಾಸನ: ಕೆಲವೇ…
ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ ಪುತ್ತೂರು: ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ನೀರಕಟ್ಟೆ…
ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ ಉಡುಪಿ : ಸುದೀಪ್ ಶೆಟ್ಟಿ ಆತ್ಮಹತ್ಯೆ…