ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಿತು ಭಾರಿ ಅವಘಡ- ನಾಲ್ವರಿಗೆ ಗಾಯ

Featured, ದಕ್ಷಿಣ ಕನ್ನಡ

ಮಂಗಳೂರು; ಇತಿಹಾಸಪ್ರಸಿದ್ದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಸಂಜೆ ಪೂಜೆಯ ವೇಳೆಗೆ ದೇವಸ್ಥಾನದ ಎದುರಿಗೆ ಇದ್ದ ಅಶ್ವತ್ಥ ಮರ ಉರುಳಿಬಿದ್ದು ನಾಲ್ವರಿಗೆ ಗಾಯವಾದ ಘಟನೆ ನಡೆದಿದೆ.

ದೇವಸ್ಥಾನದ ಮುಂಭಾಗದಲ್ಲಿರುವ ನಾಗನಕಟ್ಟೆಯ ಲ್ಲಿರುವ ಅಶ್ವಥ ಮರ ದೇವಸ್ಥಾನ ದ ಪ್ರವೇಶ ದ್ವಾರಕ್ಕೆ ಉರುಳಿಬಿದ್ದಿದೆ.
ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು ಓರ್ವನ ಸ್ಥಿತಿ ಗಂಭೀರವಾಗಿ ದೆ ಎಂದು ತಿಳಿದು ಬಂದಿದೆ.
ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬಿದ್ದ ಮರ ತೆರವು ಕಾರ್ಯಚರಣೆ ಮಾಡುತ್ತಿದ್ದಾರೆ.