ಮಂಗಳೂರಿಗೆ ಬಂದಿಳಿದ ಬೆಂಗಳೂರಿನ ಬಾಲಕಿ ನಾಪತ್ತೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರಿಗೆ ಬಂದಿಳಿದ ಬೆಂಗಳೂರಿನ ಬಾಲಕಿ ನಾಪತ್ತೆ

ಮಂಗಳೂರು: ಸೋಮವಾರ ಮಂಗಳೂರಿಗೆ ಬಂದಿಳಿದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಬಾಲಕಿ ಭಾರ್ಗವಿ (14) ನಾಪತ್ತೆಯಾಗಿದ್ದಾರೆ.

ಭಾರ್ಗವಿ ಅವರು ಸೋಮವಾರ ಮುಂಜಾನೆ 3 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ನಂತರ ನಾಪತ್ತೆಯಾಗಿದ್ದಾರೆ.

ಇನ್ನು ಆಟೋ ಬಾಡಿಗೆಗೆ ಪಡೆದು ಮುಕ್ಕಾ ಬೀಚ್, ಕದ್ರಿ ಪಾರ್ಕ್ ಪ್ರವಾಸ ಮಾಡಿದ್ದಳು ಎನ್ನಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ತಲುಪಿದ ಬಳಿಕ ಆಟೋ ಚಾಲಕನೊಬ್ಬನಿಗೆ ತನ್ನ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ಆಕೆ ಎಲ್ಲಿದ್ದಾಳೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಡುಪಿ : ಚಲಿಸುತ್ತಿದ್ದ ರೈಲಿಗೆ ತಲೆ‌ ಕೊಟ್ಟು 10 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ – Vishwanews24

Leave a Reply