ದಕ್ಷಿಣ ಕನ್ನಡ

ಮಂಗಳೂರಿನಲ್ಲಿ ನಕಲಿ ಮತದಾರರ ಪಟ್ಟಿ, ಅಧಿಕಾರಿಗಳ ಶಾಮೀಲು ಆರೋಪ …

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆ ನಡೆಯುತ್ತಿರುವ ಚುನಾವಣಾ ಅಕ್ರಮಗಳು ಬಯಲಾಗುತ್ತಿವೆ. ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರ ಹಾವಳಿ ಶುರುವಾಗಿದೆ. ಮಂಗಳೂರಿನ ಶಕ್ತಿನಗರದ ನಾಲ್ಯಪದವು ವಾರ್ಡಿನಲ್ಲಿ ಒಂದೇ ಡೋರ್ ನಂಬರಿನಲ್ಲಿ 260ಕ್ಕೂ ಹೆಚ್ಚು ನಕಲಿ ಮತಗಳಿರುವುದು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ.  ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ ಈ ಕುರಿತು ಬಿಜೆಪಿ ಮುಖಂಡರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ ನಕಲಿ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಇದೀಗ ಮತ್ತೆ ಡಿಲೀಷನ್ ಪ್ರಕ್ರಿಯೆ ನಡೆದ ಬಳಿಕ ಮತಪಟ್ಟಿ ಬಿಡುಗಡೆಯಾಗಿದ್ದರೂ, 69 ಮತದಾರರು ಒಂದೇ ಡೋರ್ ನಂಬರಿನಲ್ಲಿ ವಾಸವಿರುವುದು ಪತ್ತೆಯಾಗಿರುವುದು ಅಧಿಕಾರಿಗಳ ವಿರುದ್ದವೇ ಅನುಮಾನ ಕಾಡಲಾರಂಭಿಸಿದೆ. ಮಂಗಳೂರಿನ ಮೆಡಿಕಲ್ ಕಾಲೇಜುಗಳಲ್ಲಿ ಕಲಿಯುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಶಕ್ತಿನಗರದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಇರುವ 119- 20 ಡೋರ್ ನಂಬರಿನಲ್ಲಿ 69 ಮತದಾರರನ್ನು ಸೇರ್ಪಡೆಗೊಳಿಸಿರುವುದು ಪತ್ತೆಯಾಗಿದೆ. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಚುನಾವಣಾಧಿಕಾರಿಗಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ಮುಖಂಡರು ಆರೋಪಿಸಿದ್ದು ಅಧಿಕಾರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ

Vishwa News 24

Recent Posts

ಕಾಪುವಿನಲ್ಲಿ ನ.27ರಂದು ಬೃಹತ್ ಉಚಿತ ಉದ್ಯೋಗ ಮೇಳ -vishwanews24

ಕಾಪುವಿನಲ್ಲಿ ನ.27ರಂದು ಬೃಹತ್ ಉಚಿತ ಉದ್ಯೋಗ ಮೇಳ ವಿದೇಶಿ ಕಂಪೆನಿ ಸೇರಿದಂತೆ ಹತ್ತಾರು ಸಂಸ್ಥೆಗಳ ಭಾಗಹಿಸುವಿಕೆ ಕಾಪು: ಯುವಜನತೆಗೆ ಉದ್ಯೋಗಾವಕಾಶ…

11 hours ago

ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ -vishwanews24

ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ ನವದೆಹಲಿ: ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪದಾಧಿಕಾರಿಗಳನ್ನು…

2 days ago

ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ – vishwanews24

ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ ಇತಿಹಾಸ ಪ್ರಸಿದ್ಧ ಕಾಪು ಹಳೆ…

4 days ago

ಸಂಬಂಧಿಕರನ್ನು ಬೀಳ್ಕೊಡಲು ಬಂದ 12 ಮಂದಿ ವಂದೇ ಭಾರತ್‌ ರೈಲಲ್ಲಿ ಲಾಕ್‌ ; 36 ಸಾವಿರ ದಂಡ – vishwanews24

ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರವೇಶಿಸಿದ 12 ಮಂದಿ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದ್ದರಿಂದ ರೈಲಿನೊಳಗೆ ಲಾಕ್ 140 ಕಿ.ಮೀ…

4 days ago

ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹ 20ರವರೆಗೆ ಕಡಿತ – vishwanews24

ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹20ರವರೆಗೆ ಕಡಿತ ಬೆಂಗಳೂರು: ಮಾರುಕಟ್ಟೆಯಲ್ಲಿ ಹೊಸ…

4 days ago

ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು -vishwanews24

ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು ನವದೆಹಲಿ: ಸೌದಿ ಅರೇಬಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ…

4 days ago