ಮಂಗಳೂರಿನಲ್ಲಿ ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರ ವಾಸ್ತವ್ಯ – vishwanews24
ಮಂಗಳೂರಿನಲ್ಲಿ ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರ ವಾಸ್ತವ್ಯ
ಮಂಗಳೂರು : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರು ವಾಸ್ತವ್ಯವಿರುವುದು ಪೊಲೀಸ್ ಪರಿಶೀಲನೆ ವೇಳೆ ಪತ್ತೆಯಾಗಿದೆ. ಆದರೆ ಇವರು 12-13 ವರ್ಷಗಳ ಹಿಂದೆಯೇ ಮಂಗಳೂರಿಗೆ ಬಂದು ವಾಸ್ತವ್ಯ ಹೂಡಿ ಭಾರತೀಯ ಪ್ರಜೆಗಳನ್ನು ಮದುವೆಯಾಗಿದ್ದಾರೆ.
ಈ ಪೈಕಿ ಒಬ್ಬರು ನಗರದ ಫಳ್ನೀರ್, ಇನ್ನೊಬ್ಬರು ವಾಮಂಜೂರಿನಲ್ಲಿ ನೆಲೆಸಿದ್ದಾರೆ. ಇನ್ನೊಬ್ಬ ಮಹಿಳೆಯ ವಾಸಸ್ಥಳದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಈಗಾಗಲೇ ರಾಜ್ಯ ಸರಕಾರಕ್ಕೆ ಮಾಹಿತಿ ರವಾನೆ ಮಾಡಲಾಗಿದೆ. ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸದ್ಯ ಯಾವುದೇ ಪಾಕಿಸ್ಥಾನಿ ನಾಗರಿಕರು ಪತ್ತೆಯಾಗಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಯಾವುದೇ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಿಲ್ಲ ಎಂದು ಉಡುಪಿ ಎಸ್ಪಿ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳಿಲ್ಲ: ಎಸ್ಪಿ ಡಾ.ಕೆ.ಅರುಣ್ – vishwanews24
