Featured

ಮಂಗಳೂರಿನಿಂದ ಕುವೈಟ್‌ ವಿಮಾನಯಾನ  6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಸಂಕಷ್ಟ – vishwanews24

ಮಂಗಳೂರಿನಿಂದ ಕುವೈಟ್‌ ವಿಮಾನಯಾನ  6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಪರದಾಟ

ಮಂಗಳೂರು: ಮಂಗಳೂರಿನಿಂದ ಕುವೈಟ್‌ಗೆ ನೇರ ವಿಮಾನಯಾನ ಸ್ಥಗಿತಗೊಂಡು 6 ತಿಂಗಳುಗಳು ಕಳೆದಿದ್ದು ಕುವೈಟ್‌ಗೆ ಹೋಗುವ ಹಾಗೂ ಕುವೈಟ್‌ನಿಂದ ಬರುವ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

ಇರಾನ್-ಇಸ್ರೇಲ್, ಅಮೆರಿಕಾ ಯುದ್ಧ ಆರಂಭಗೊಂಡ ಬಳಿಕ (ಫೆ. 28) ಗಲ್ಫ್ ರಾಷ್ಟ್ರಗಳ ವಿಮಾನ ಸಂಪರ್ಕ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ಯುದ್ಧದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಬಹುತೇಕ ರಾಷ್ಟ್ರಗಳಿಗೆ ವಿಮಾನಯಾನ ಪುನರಾರಂಭಗೊಂಡಿತ್ತು. ಆದರೆ ಕುವೈಟ್ ವಿಮಾನ ಮಾತ್ರ ಮತ್ತೆ ಯಾನ ಆರಂಭಿಸಿಲ್ಲ. ಯುದ್ಧದ ಮೊದಲು ವಾರಕ್ಕೆ 3 ಏರ್‌ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳು ಕುವೈಟ್-ಮಂಗಳೂರು ನಡುವೆ ಯಾನ ನಡೆಸುತ್ತಿದ್ದವು.

ಮಂಗಳೂರಿನ ಸಾವಿರಾರು ಪ್ರಯಾಣಿಕರು ಬೆಂಗಳೂರು, ಮುಂಬಯಿ, ಕ್ಯಾಲಿಕಟ್ ಮೊದಲಾದ ದೂರದ ನಗರಗಳಿಗೆ ತೆರಳಿ ಅಲ್ಲಿಂದ ಕುವೈಟ್‌ಗೆ ಪ್ರಯಾಣಿಸುತ್ತಿದ್ದಾರೆ. ಇದರಿಂದ ಸಮಯ, ಪ್ರಯಾಣ ವೆಚ್ಚ ತುಂಬಾ ಹೆಚ್ಚಾಗಿದೆ.

ಕುವೈಟ್ ಹೊರತುಪಡಿಸಿದರೆ ಉಳಿದಂತೆ ಅಬುಧಾಬಿ, ಬಹ್ಮನ್, ದಮಾಮ್, ದುಬೈ, ದೋಹ, ಜೆವ್ವಾ, ಮಸ್ಕತ್ ಗಳಿಗೆ ಮಂಗಳೂರಿನಿಂದ ವಿಮಾನ
ಸಂಚಾರವಿದೆ.

Vishwa News 24

Recent Posts

ಬೈಂದೂರು:  ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು – ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್ ಗಳು ಜಖಂ – vishwanews24

ಬೈಂದೂರು:  ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು - ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್…

14 minutes ago

ಮುಲ್ಕಿ:  ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು – vishwanews24

ಮುಲ್ಕಿ:  ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು ಮುಲ್ಕಿ : ತಿಂಗಳ ಹಿಂದೆ ತನ್ನ ಕೆಲಸದ…

26 minutes ago

2,186 ಕೋಟಿ ಅನುದಾನ ಬಾಕಿ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​​ ಮೊರೆ  : ಈಶ್ವರ ಖಂಡ್ರೆ – vishwanews24

2,186 ಕೋಟಿ ಅನುದಾನ ಬಾಕಿ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​​ ಮೊರೆ  : ಈಶ್ವರ ಖಂಡ್ರೆ  ಬೆಂಗಳೂರು: 15ನೇ…

1 hour ago

ಸೆ.26ರಿಂದ ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ – vishwanews24

ಸೆ.26ರಿಂದ ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ ಮೂಡುಬಿದಿರೆ: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ…

2 hours ago

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಸತಿ ಬುಕಿಂಗ್ ಹೆಸರಲ್ಲಿ ನಕಲಿ ವೆಬ್‌ಸೈಟ್ ; ಪ್ರಕರಣ ದಾಖಲು – vishwanews24

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಸತಿ ಬುಕಿಂಗ್ ಹೆಸರಲ್ಲಿ ನಕಲಿ ವೆಬ್‌ಸೈಟ್ ; ಪ್ರಕರಣ ದಾಖಲು ಉಡುಪಿ : ಕೊಲ್ಲೂರಿನ ಶ್ರೀ…

2 hours ago

ಕುಂದಾಪುರ: 2016 ರಲ್ಲಿ ಶಾಲಾ ಮಕ್ಕಳ ಬಲಿ ಪಡೆದ ಅಪಘಾತ ಪ್ರಕರಣ: 10 ವರ್ಷಗಳ ಬಳಿಕ ತೀರ್ಪು ಪ್ರಕಟ- vishwanews24

ಕುಂದಾಪುರ: ಶಾಲಾ ಮಕ್ಕಳ ಅಪಘಾತ ಪ್ರಕರಣ: ಬಸ್ ಚಾಲಕನಿಗೆ 1 ವರ್ಷ 17 ದಿನ ಜೈಲು ಕುಂದಾಪುರ: ಎಂಟು ಶಾಲಾ…

2 hours ago