Featured

ಬೈಂದೂರು:  ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು – ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್ ಗಳು ಜಖಂ – vishwanews24

ಬೈಂದೂರು:  ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು – ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್ ಗಳು ಜಖಂ

ಬೈಂದೂರು: ಅಪಘಾತಕ್ಕೀಡಾಗಿದ್ದ ವಾಹನವೊಂದರ ತೆರವು ಕಾರ್ಯಾಚರಣೆ ವೇಳೆಯ ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ಶಿರೂರು ಸಮೀಪ ಗುರುವಾರ ನಡೆದಿದೆ.

ಮೃತರನ್ನು ಶಿರೂರಿನ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ.

ಅಪಘಾತಕ್ಕೀಡಾಗಿದ್ದ ವಾಹನವೊಂದನ್ನು ಮೇಲೆತ್ತುವ ಕಾರ್ಯಾಚರಣೆ ವೇಳೆ ಈ ಸರಣಿ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಪೊಲೀಸರ ಗಸ್ತು (ಹೈವೆ ಪಟ್ರೋಲ್) ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರ ಜೊತೆಗೆ ನಾಲ್ಕು ಬೈಕ್ ಗಳಿಗೂ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ನಾಗೇಂದ್ರ ಎಂಬವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ :

ಹೆದ್ದಾರಿಯಲ್ಲಿ ಸರಕು ತುಂಬಿದ ಲಾರಿಯೊಂದು ಅಪಘಾತಕ್ಕೀಡಾಗಿತ್ತು. ಹೆದ್ದಾರಿ ನಿರ್ವಹಣೆಯವರು ಈ ಲಾರಿಯನ್ನು ಮೇಲೆತ್ತುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ರಸ್ತೆ ತಡೆ ಮಾಡಲಾಗಿತ್ತು. ವಾಹನ ಸಂಚಾರ ತಡೆಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇಳಿಜಾರು ರಸ್ತೆಯಾದ ಕಾರಣ ಅತಿವೇಗದಿಂದ ನುಗ್ಗಿದ ಲಾರಿ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ. ಈ ಲಾರಿ ಕೇರಳದಿಂದ ರಬ್ಬರ್ ಮಹಾರಾಷ್ಟ್ರದ ಕಡೆ ರಬ್ಬರ್ ಸಾಗಿಸುತ್ತಿತ್ತು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :

ಈ ಬಗ್ಗೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಸರ್ಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ : ಸಿದ್ದರಾಮಯ್ಯ – vishwanews24

ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಸರ್ಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ : ಸಿದ್ದರಾಮಯ್ಯ ಬೆಂಗಳೂರು:ಡಿ.ಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಅವರ…

9 minutes ago

ಉಡುಪಿ : 28 ಗಂಟೆಗಳ ನಿರಂತರ ಗಾಯನದ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಖ್ಯಾತ ಗಾಯಕ ವಿದ್ವಾನ್ ಯಶವಂತ್ ಎಂ.ಜಿ. – vishwanews24

ಉಡುಪಿ : 28 ಗಂಟೆಗಳ ನಿರಂತರ ಗಾಯನದ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಖ್ಯಾತ ಗಾಯಕ ವಿದ್ವಾನ್ ಯಶವಂತ್…

25 minutes ago

ಕರ್ನಾಟಕದ ಗ್ಯಾರಂಟಿ ಮಾಡೆಲ್ ದೇಶದ ಎಲ್ಲೆಲ್ಲೂ ಇದೆ : ಸಿಎಂ ಡಿಕೆ ಶಿ – vishwanews24

ಕರ್ನಾಟಕದ ಗ್ಯಾರಂಟಿ ಮಾಡೆಲ್ ದೇಶದ ಎಲ್ಲೆಲ್ಲೂ ಇದೆ : ಸಿಎಂ ಡಿಕೆ ಶಿ ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನ…

34 minutes ago

ಮುಲ್ಕಿ:  ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು – vishwanews24

ಮುಲ್ಕಿ:  ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು ಮುಲ್ಕಿ : ತಿಂಗಳ ಹಿಂದೆ ತನ್ನ ಕೆಲಸದ…

3 hours ago

ಮಂಗಳೂರಿನಿಂದ ಕುವೈಟ್‌ ವಿಮಾನಯಾನ  6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಸಂಕಷ್ಟ – vishwanews24

ಮಂಗಳೂರಿನಿಂದ ಕುವೈಟ್‌ ವಿಮಾನಯಾನ  6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಪರದಾಟ ಮಂಗಳೂರು: ಮಂಗಳೂರಿನಿಂದ ಕುವೈಟ್‌ಗೆ ನೇರ ವಿಮಾನಯಾನ…

3 hours ago

2,186 ಕೋಟಿ ಅನುದಾನ ಬಾಕಿ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​​ ಮೊರೆ  : ಈಶ್ವರ ಖಂಡ್ರೆ – vishwanews24

2,186 ಕೋಟಿ ಅನುದಾನ ಬಾಕಿ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​​ ಮೊರೆ  : ಈಶ್ವರ ಖಂಡ್ರೆ  ಬೆಂಗಳೂರು: 15ನೇ…

4 hours ago