ಮಂಗಳೂರಿನ ಪಂಪ್‍ವೆಲ್ ಫ್ಲೈ ಓವರ್ ಮೇಲೆ ವೀರ್ ಸಾವರ್ಕರ್ ಬ್ಯಾನರ್ ಅಳವಡಿಕೆ. vishwanews24

Featured, ರಾಜ್ಯ ನ್ಯೂಸ್

ಮಂಗಳೂರು: ನಗರದಲ್ಲಿರುವ ಪಂಪ್‍ವೆಲ್ ಫ್ಲೈ ಓವರ್ ಮೇಲೆ ವೀರ್ ಸಾವರ್ಕರ್ ಮೇಲ್ಸೇತುವೆ ಎಂಬ ಬ್ಯಾನರ್ ಹಾಕಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲ ಅಪರಿಚಿತರು ಮೇಲ್ಸೇತುವೆ ಮೇಲೆ ವೀರ್ ಸಾವರ್ಕರ್ ಹೆಸರಿನ ಬ್ಯಾನರ್ ಹಾಕಿ ಪಕ್ಕದಲ್ಲಿಯೇ ಬಜರಂಗದಳ ಎಂದು ಬರೆದು ಫೋಟೋ ಕ್ಲಿಕ್ಕಿಸಿದ್ದಾರೆ. ಫೋಟೋ ಕ್ಲಿಕ್ಕಿಸಿದ ಬಳಿಕ ಬ್ಯಾನರ್ ತೆಗೆದು ಹಾಕಿದ್ದಾರೆ. ಸದ್ಯ ಸ್ಥಳೀಯ ಮಟ್ಟದಲ್ಲಿ ವೀರ್ ಸಾವರ್ಕರ್ ಬ್ಯಾನರ್ ಫೋಟೋಗಳು ಮಿಂಚಿನಂತೆ ಹರಿದಾಡುತ್ತಿವೆ.