ಮಂಗಳೂರು: ಮಂಗಳೂರಿನ ಮಾರುಕಟ್ಟೆಗೆ ಈಜಿಪ್ಟ್ ದೇಶದ ಈರುಳ್ಳಿ ಬಂದಿದೆ. ಬುಧವಾರ ಬೆಳಗ್ಗೆ ಲಾರಿಯಲ್ಲಿ ಪುಣೆಯಿಂದ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ಗೆ ಬಂದಿದೆ.
ನಗರದ ಪ್ರಮುಖ ಈರುಳ್ಳಿ ವ್ಯಾಪಾರ ಸಂಸ್ಥೆ ಸಾಯಿ ಟ್ರೇಡರ್ ಗೆ ಈ ವಿದೇಶಿ ಈರುಳ್ಳಿ ಬಂದಿದ್ದು, ಅನ್‌ಲೋಡ್ ಆದ ಕೂಡಲೇ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಇದು ವಿತರಣೆಯಾಗಿದೆ.
ಮಂಗಳೂರಿಗೆ ವಿದೇಶಿ ಈರುಳ್ಳಿ ಇದೇ ಮೊದಲ ಬಾರಿಗೆ ಪೂರೈಕೆಯಾಗಿದೆ. ಈಜಿಪ್ಟಿಯನ್ ಈರುಳ್ಳಿ ದೊಡ್ಡ ಗಾತ್ರದಲ್ಲಿದ್ದು, ಸಾಮಾನ್ಯವಾಗಿ ಒಂದು ಈರುಳ್ಳಿ 250 ಗ್ರಾಂ (ಕಾಲು ಕೆ.ಜಿ.) ತೂಕವಿದೆ. ಇದರ ಬಣ್ಣ ಸ್ವಲ್ಪ ಜಾಸ್ತಿ ಕೆಂಪು ಇದ್ದು, ನೋಡಲು ಹೆಚ್ಚು ಅಂದವಾಗಿದೆ.
ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಬುಧವಾರ ಈಜಿಪ್ಟಿಯನ್ ಈರುಳ್ಳಿಯ ದರ ಸಗಟು ಮಾರಾಟ ಬೆಲೆ ಕೆ.ಜಿ.ಗೆ 62 ರೂ. ಹಾಗೂ ಚಿಲ್ಲರೆ ಮಾರಾಟ ಬೆಲೆ 65 ರೂ. ಇತ್ತು. ಪೂನಾದಿಂದ ಇದು ಕೆ.ಜಿ. ಒಂದರ 50 ರೂ.ನಂತೆ ಸಾಯಿ ಟ್ರೇಡರ್ ಗೆ ತಲುಪಿದ್ದು, ಅಲ್ಲಿಂದ 57 ರೂಪಾಯಿಗೆ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಕೈಸೇರಿದೆ. ದೇಶೀಯ ಈರುಳ್ಳಿ ದರ ಹಳೆಯ ಈರುಳ್ಳಿಗೆ 75 ರೂ. ಹಾಗೂ ಹೊಸ ಈರುಳ್ಳಿಗೆ 70 ರೂ. ಇದೆ. ಹೊಸ ಈರುಳ್ಳಿಯಲ್ಲಿ ಸಣ್ಣ ಈರುಳ್ಳಿ ಎಂಬ ಇನ್ನೊಂದು ವೆರೈಟಿ ಇದ್ದು, ಅದರ ಬೆಲೆ 50 ರೂ. ಇದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…