Featured

ಮಂಗಳೂರು : ಅನಧಿಕೃತ ಜಾಹೀರಾತು ಫಲಕ ತೆರವು :- ಸಾರ್ವಜನಿಕ ಸಭೆ ಸಮಾರಂಭಗಳ ಮೇಲೆ ನಿಗಾ: ದ.ಕ. ಜಿಲ್ಲಾಧಿಕಾರಿ ಸೂಚನೆ – Vishwanews24

ಮಂಗಳೂರು : ಅನಧಿಕೃತ ಜಾಹೀರಾತು ಫಲಕ ತೆರವು- ಸಾರ್ವಜನಿಕ ಸಭೆ ಸಮಾರಂಭಗಳ ಮೇಲೆ ನಿಗಾ: ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು : ವಿಧಾನಸಭಾ ಚುನಾವಣೆ ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ. ಆದ್ದರಿಂದ ನಿಷ್ಪಕ್ಷ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಅದೇರೀತಿ ಸಾರ್ವಜನಿಕರ ಸಭೆ ಸಮಾರಂಭಗಳ ಮೇಲೆ ನಿಗಾ ಇರಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಹಾಕಲಾಗಿರುವ ಬ್ಯಾನರ್‌- ಬಂಟಿಂಗ್ಸ್‌ ಮತ್ತು ಫ್ಲೆಕ್ಸ್‌, ಗೋಡೆ ಬರಹ ಮತ್ತು ಇತರ ಜಾಹೀರಾತುಗಳನ್ನು ತೆರವುಗೊಳಿಸಿ ಪ್ರತೀ ದಿನ ವರದಿ ಸಲ್ಲಿಸಬೇಕು ಎಂದು ಸೂಚಿಸಿರುವ ಜಿಲ್ಲಾಧಿಕಾರಿ, ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ ರಾಜಕೀಯ ಪಕ್ಷ ಮತ್ತು ರಾಜಕೀಯ ವ್ಯಕ್ತಿಗಳು ಸಾರ್ವಜನಿಕ ಔತಣಕೂಟ ಏರ್ಪಡಿಸುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದಲ್ಲಿ ಸ್ಥಳೀಯ ಪ್ರಾಧಿಕಾರಗಳು, ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಐಪಿಸಿ ಕಲಂ 171 ರಡಿಯಲ್ಲಿ ಹಾಗೂ ಸಂಬಂಧಪಟ್ಟ ಇತರ ಕಾಯ್ದೆಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಯಾವುದೇ ಸಭಾ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಸಭೆ ಮುಕ್ತಾಯವಾದ ಅನಂತರ ಬ್ಯಾನರ್‌ -ಬಂಟಿಂಗ್‌ ತೆರವುಗೊಳಿಸಲು ಸೂಚಿಸಬೇಕು. ಕಾನೂನು ಸುವ್ಯವಸ್ಥೆ, ಸಾಮಾಜಿಕ ಅಶಾಂತಿ ಹಾಗೂ ಶಬ್ದಮಾಲಿನ್ಯ ಉಂಟುಮಾಡುವ ಯಾವುದೇ ಚಟುವಟಿಕೆ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಕೊಂಡು ಜಿಲ್ಲಾಡಳಿತಕ್ಕೆ ವರದಿ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿದಿನ ತಮ್ಮ ನೇತೃತ್ವದಲ್ಲಿ ಮೇಲು ಉಸ್ತುವಾರಿ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕು. ಈ ಕುರಿತ ವರದಿ ಪ್ರತಿದಿನ ಮತ್ತು ಒಟ್ಟಾರೆ ಮಾಹಿತಿ ಪ್ರತೀ ಶನಿವಾರ ಜಿ.ಪಂ. ಸಿಇಒ ಅವರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Vishwa News 24

Recent Posts

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ – vishwanews24

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ ಮಂಗಳೂರು: ತಡೆಗೋಡೆ…

2 minutes ago

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ರಿಯಾಕ್ಷನ್ – vishwanews24

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…

10 minutes ago

ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ – vishwanews24

ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಜು.6 ಕ್ಕೆ ಬೆಳಗಾವಿಗೆ…

17 minutes ago

ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು – vishwanews24

ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಅಹಮದಾಬಾದ್: ಕೇವಲ…

24 minutes ago

ಪಾನ್ ಮಸಾಲಾ, ಗುಟ್ಕಾ ಮಾರಾಟ  ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ : ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ – vishwanews24

ಪಾನ್ ಮಸಾಲಾ, ಗುಟ್ಕಾ ಮಾರಾಟ  ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ:  ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ ಬೆಂಗಳೂರು:…

37 minutes ago

ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ – vishwanews24

ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ ರಾಮನಗರ: ರಾಮನಗರ ಜಿಲ್ಲೆಯ ಬೆಂಗಳೂರು…

49 minutes ago