ಮಂಗಳೂರು: ಎಸ್ಎಸ್ಎಲ್ ಸಿ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಮಗುವಿನ ಜನನಕ್ಕೆ ಕಾರಣನಾದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಉಪ್ಪಿನಂಗಡಿಯ ಹಿರೆಬಂಡಾಡಿ ಗ್ರಾಮದ ಮದ್ಮಿತ್ತಿಮಾರು ನಿವಾಸಿ ಕೇಶವ(34) ಅತ್ಯಾಚಾರ ಆರೋಪಿ.
ಈ ಅಪ್ರಾಪ್ತ ಬಾಲಕಿಯ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿದೆಯೆಂದು ಪೋಷಕರು ಚಿಕಿತ್ಸೆ ಕೊಡಿಸಲೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಪಾಸಣೆ ನಡೆಸಿದ ವೈದ್ಯರಿಗೆ ಆಕೆ ತುಂಬು ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಇದೀಗ ಆಕೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ಈ ವಿಚಾರವನ್ನು ಉಪ್ಪಿನಂಗಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ. ಆಗ ಉಪ್ಪಿನಂಗಡಿಯ ಹಿರೆಬಂಡಾಡಿ ಗ್ರಾಮದ ಮದ್ಮಿತ್ತಿಮಾರು ನಿವಾಸಿ ಕೇಶವ ಎಂಬಾತ ಅತ್ಯಾಚಾರಗೈದಿರುದಾಗಿ ಬಾಲಕಿ ಹೇಳಿದ್ದಾಳೆ. ಪೊಕ್ಸೊ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…