ಮಂಗಳೂರು :ಅವನ ತಪ್ಪುಗಳಿಗೆ ನಾವು ಜವಾಬ್ದಾರರಲ್ಲ , ನಮಗೂ ಆತನಿಗೂ ಯಾವುದೇ ಸಂಬಂಧ ಇಲ್ಲ : ಆದಿತ್ಯ ರಾವ್ ಸಹೋದರ -Vishwanews24

Featured, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ಮಂಗಳೂರು : ಆದಿತ್ಯನಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಆತನ ತಪ್ಪುಗಳಿಗೆ ನಾವು ಜವಾಬ್ದಾರರಲ್ಲ. ನಾವು ಅವನ ಕೃತ್ಯಕ್ಕೆ ಸಪೋರ್ಟ್ ಕೂಡ ಮಾಡುವುದಿಲ್ಲ. ನಮ್ಮ ಅನ್ನಕ್ಕಾಗಿ ನಾವು ದುಡಿಯುತ್ತಿದ್ದೇವೆ. ಆತ ನನ್ನ ಅಣ್ಣ ಹೌದು.. ಆದ್ರೇ ಆತನೊಂದಿಗೆ ಈ ಹಿಂದೆ ಇಂತಹ ಕೃತ್ಯ ಎಸಗಿದ ನಂತ್ರ ಮಾತನಾಡುತ್ತಿಲ್ಲ ಎಂಬುದಾಗಿ ಆದಿತ್ಯ ರಾವ್ ಸಹೋದರ ಅಕ್ಷತ್ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ರಾವ್ ತಮ್ಮ ಅಕ್ಷತ್, ನಾವು ನಮ್ಮ ಅನ್ನಕ್ಕಾಗಿ ದುಡಿಯುತ್ತಿದ್ದೇವೆ. ಆತನಿಗೆ ಎಷ್ಟೇ ಬುದ್ಧಿ ಹೇಳಿದರೂ ಬದಲಾಗಲಿಲ್ಲ. ಇದೇ ವಿಚಾರದಲ್ಲಿ ಅಪ್ಪ ತುಂಬಾ ಸಾರಿ ಅವನನ್ನು ಬದಲಾಯಿಸಲು ಪ್ರಯತ್ನ ಪಟ್ಟರು ಆದ್ರೇ ಬದಲಾಗಲಿಲ್ಲ. ಹೀಗಾಗಿ ಅವನ ಸಂಪರ್ಕದಲ್ಲಿಯೇ ನಾವು ಇಲ್ಲ ಎಂದು ತಿಳಿಸಿದರು.

ಆತನು ನಾನು ಹೈಸ್ಕೂಲ್ ವರೆಗೆ ಜೊತೆಗೆ ಬೆಳೆದೆವು. ಕಾಲೇಜು ಸಮಯದಲ್ಲಿ ಆತ ಹಾಸ್ಟೆಲ್ ಗೆ ಸೇರಿದ. ಆನಂತ್ರ ಆತನ ಸಂಪರ್ಕ ನನ್ನೊಂದಿಗೆ ಕಡಿಮೆ ಆಯಿತು. ಕಳೆದ ಬಾರಿ ಬಾಂಬ್ ಬೆದರಿಕೆ ಕರೆಯ ನಂತ್ರ ಬುದ್ದಿ ಹೇಳಲಾಗಿತ್ತು. ಆದ್ರೇ ತಿದ್ದಿಕೊಳ್ಳಲಿಲ್ಲ. ನಾನು ಅವನೊಂದಿಗೆ ಸಂಪರ್ಕ ಬಿಟ್ಟೆವು. ಮನೆಯಲ್ಲಿ ಅಮ್ಮ ತೀರಿಕೊಂಡಾಗಲೂ ತಿಳಿಸಿದ್ರೂ ಬರಲಿಲ್ಲ. ನಾನೇ ಅಮ್ಮನ ತಿಥಿಕಾರ್ಯ ಮಾಡಿದೆ ಎಂದರು.

2019 ಫೆಬ್ರವರಿ ಕೊನೇ, ನಮ್ಮ ಕುಟುಂಬದ ನಾನಾಗಲೀ, ನಮ್ಮ ತಂದೆಯಾಗಲೀ ಆತನ ಸಂಪರ್ಕದಲ್ಲಿ ಇಲ್ಲ. ಆತ ಜೈಲಿಗೆ ಹೋದಾಗಲೂ ಬೇಲ್ ಗೆ ನಾವು ಸಹಕರಿಸಿಲ್ಲ. ಅವನಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದೇವೆ. ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಅವನ ಯಾವುದೇ ಕೃತ್ಯಕ್ಕೂ ನಾವು ಸಪೋರ್ಟ್ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292