Featured

ಮಂಗಳೂರು: ಈ ವರ್ಷದಿಂದ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ವಿದ್ಯಾರ್ಥಿನಿಯರ ಜತೆ ವಿದ್ಯಾರ್ಥಿಗಳಿಗೂ ಅವಕಾಶ – Vishwanews24

ಮಂಗಳೂರು: ಈ ವರ್ಷದಿಂದ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ವಿದ್ಯಾರ್ಥಿನಿಯರ ಜತೆ ವಿದ್ಯಾರ್ಥಿಗಳಿಗೂ ಅವಕಾಶ

ಮಂಗಳೂರು: ನಗರದ ಸೇಂಟ್ ಆಗ್ನೆಸ್ ಕಾಲೇಜಿನ ಪದವಿ ತರಗತಿಗಳಿಗೆ ಈ ವರ್ಷ ವಿದ್ಯಾರ್ಥಿನಿಯರ ಜತೆ ವಿದ್ಯಾರ್ಥಿಗಳಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸೇಂಟ್ ಆಗ್ನೆಸ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ. ಎಂ. ಲಿಡಿಯಾ ಎ.ಸಿ. ತಿಳಿಸಿದರು.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈಗಾಗಲೇ ಸ್ನಾತಕೋತ್ತರ ವಿಭಾಗದಲ್ಲಿ ಸಹ ಶಿಕ್ಷಣ ನೀಡಲಾಗುತ್ತಿದ್ದು, ಅದನ್ನು ಪದವಿಗೂ ವಿಸ್ತರಿಸಲಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ದೊರಕಿದ್ದು, 2022-23ನೇ ಸಾಲಿನಿಂದಲೇ ವಿದ್ಯಾರ್ಥಿಗಳಿಗೂ ಪದವಿ ತರಗತಿಗಳಿಗೆ ಪ್ರವೇಶ ನೀಡಲು ಕಾಲೇಜು ಸಿದ್ಧತೆ ನಡೆಸಿದೆ.

ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಂದರ್ಭದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಸೇಂಟ್ ಆಗ್ನೆಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದ್ದು, ವಿವಿಧ ವೃತ್ತಿಪರ ಕೋರ್ಸ್‍ಗಳನ್ನು ಪರಿಚಯಿಸುವ ಮತ್ತು ನಡೆಸುವ ಸೌಲಭ್ಯವನ್ನೂ ಹೊಂದಿದೆ.

ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ವೆನಿಸ್ಸಾ, ಆಡಳಿತ ಡೀನ್ ಶುಭರೇಖಾ, ಅಸೋಸಿಯೇಟ್ ಪ್ರೊಫೆಸರ್ ಡಾ. ದೇವಿಪ್ರಭಾ ಆಳ್ವ, ವಿದ್ಯಾರ್ಥಿನಿ ಪ್ರತಿನಿಧಿ ಕೃಪಾ ಮರಿಯಾ ರಸ್ಕಿನಾ ಇದ್ದರು.

Vishwa News 24

Recent Posts

ಕಾರ್ಕಳ : ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಆರೋಪಿ ಸೌಮ್ಯ ಶೆಟ್ಟಿ ಜಾಮೀನು ನಿರಾಕರಿಸಿದ ಹೈಕೋರ್ಟ್‌ – vishwanews24

ಕಾರ್ಕಳ : ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಆರೋಪಿ ಸೌಮ್ಯ ಶೆಟ್ಟಿ ಜಾಮೀನು ನಿರಾಕರಿಸಿದ ಹೈಕೋರ್ಟ್‌ ಉಡುಪಿ : ಕಳೆದ…

7 minutes ago

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹೊಸ ‘ಲೈಟ್’ ದರದಲ್ಲಿ ಸಿಗಲಿದೆ  ಭರ್ಜರಿ ಲಾಭ -vishwanews24

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹೊಸ 'ಲೈಟ್' ದರದಲ್ಲಿ ಸಿಗಲಿದೆ  ಭರ್ಜರಿ ಲಾಭ ನವದೆಹಲಿ: ಭಾರತದ ಪ್ರಮುಖ ವಿಮಾನಯಾನ…

23 minutes ago

ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ – vishwanews24

ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ ಉಡುಪಿ : ಮಲಬಾರ್ ಗೋಲ್ಡ್…

38 minutes ago

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…

16 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು – vishwanews24

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…

19 hours ago

ಹಜ್ ಯಾತ್ರೆ – 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ – vishwanews24

ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…

19 hours ago