ಮಂಗಳೂರು : ನವಮಂಗಳೂರು ಬಂದರಿನ 14ನೇ ಬರ್ತ್‌ನಲ್ಲಿ 10 ಚಕ್ರದ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ ಮತ್ತೋರ್ವ ಕಾಣೆಯಾದ ಘಟನೆ ಭಾನುವಾರ ರಾತ್ರಿ 10.30 ಕ್ಕೆ ನಡೆದಿದೆ.
ಮೃತರನ್ನು ಕಂಟೈನರ್ ಲಾರಿ ಚಾಲಕ ಉತ್ತರ ಕರ್ನಾಟಕ ಮೂಲದ ರಾಜೇಸಾಬ (26) ಎಂದು ಗುರುತಿಸಲಾಗಿದ್ದು, ಲಾರಿ ಕ್ಲೀನರ್ ಭೀಮಪ್ಪ(22) ನಾಪತ್ತೆಯಾಗಿದ್ದಾರೆ.
ಡೆಲ್ಟಾ ಕಂಪನಿಯ ಕೆಎ 22 ಸಿ 8257 ನೋಂದಣಿಯ ಟ್ರಕ್ , ಕಬ್ಬಿಣದ ಅದಿರನ್ನು ಹಡಗಿನಿಂದ ಲೋಡ್ ಮಾಡಲು ಬಂದಿದ್ದ ಈ ವೇಳೆ ಘಟನೆ ನಡೆದಿದೆ. ಇದನ್ನು ಕಂಡು ಅಲ್ಲಿಂದ ಹಾದು ಹೋಗುವ ಟಗ್ ಬೋಟ್ ನ ಪೈಲಟ್ ಘಟನೆ ಬಗ್ಗೆ ವಿಟಿಎಂಎಸ್ ಕ ಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದಾರೆ.
ತಕ್ಷಣ ಸಿಐಎಸ್ಎಫ್ ಕ್ಯೂಆರ್ ಟಿ ಮತ್ತು ಸಿಸ್ಎಫ್ ಗಸ್ತು ದೋಣಿ ಅಲ್ಲಿಗೆ ತಲುಪಿ ಟಗ್ ಬೋಟ್ ಸಹಾಯದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ . ಸುಮಾರು 11.30 ರ ವೇಳೆಗೆ ಸಮುದ್ರಕ್ಕೆ ಬಿದ್ದ ಓರ್ವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ರವಾನಿಸಿದರೂ ಅದಾಗಲೇ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ .
ಕಾಣೆಯಾದ ಲಾರಿ ಕ್ಲೀನರ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…