ಮಂಗಳೂರು ಕಂಪೌಂಡ್ ಗೋಡೆಯೊಂದರಲ್ಲಿ ಲಷ್ಕರ್ ಜಿಂದಾಬಾದ್ ಬರಹದ ಹಿನ್ನಲೆ : ದೇಶವಿರೋಧಿ ಗೋಡೆಬರಹ ಬರೆದವರ ಬಂಧನಕ್ಕೆ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ -Vishwanews24
ಮಂಗಳೂರು ಕಂಪೌಂಡ್ ಗೋಡೆಯೊಂದರಲ್ಲಿ ಲಷ್ಕರ್ ‘ಜಿಂದಾಬಾದ್” ಬರಹದ ಹಿನ್ನಲೆ : ದೇಶವಿರೋಧಿ ಗೋಡೆಬರಹ ಬರೆದವರ ಬಂಧನಕ್ಕೆ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ -Vishwanews24
ಮಂಗಳೂರಿನಲ್ಲಿ ಸಂಘ-ಸಂಸ್ಥೆಗಳು ಗಟ್ಟಿಯಾಗಿದೆ ನಮ್ಮನ್ನು ಕೆಣಕಲು ಬರಬೇಡಿ..
ಉಗ್ರಗಾಮಿಗಳನ್ನು ಮಾತ್ರವಲ್ಲದೆ ಉಗ್ರರಿಗೆ ಬೆಂಬಲ ಕೊಡುವುವರನ್ನೂ ಬಂಧಿಸಬೇಕು..
ದಕ್ಷಿಣ ಕನ್ನಡ: ಮಂಗಳೂರಿನ ನಗರದ ಅಪಾರ್ಟ್ಮೆಂಟ್ ಕಂಪೌಂಡ್ ಗೋಡೆಯೊಂದರಲ್ಲಿ ಕಾಣಿಸಿಕೊಂಡ “ಲಷ್ಕರ್ ಜಿಂದಾಬಾದ್ ಬರಹದ ಹಿನ್ನಲೆ, ಇಂದು ಕದ್ರಿ ಮಲ್ಲಿಕಟ್ಟೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಭಟನೆ ನಡೆದಿದ್ದು, ದೇಶವಿರೋಧಿ ಗೋಡೆಬರಹ ಬರೆದವರ ಬಂಧನಕ್ಕೆ ಸಂಘಟನೆಯ ಪ್ರಮುಖರು ಈ ವೆಳೆ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಸಂಘ-ಸಂಸ್ಥೆಗಳು ಗಟ್ಟಿಯಾಗಿದೆ ನಮ್ಮನ್ನು ಕೆಣಕಲು ಬರಬೇಡಿ. ಮಂಗಳೂರಿನಲ್ಲಿ ಇಂತಹ ಆಟ ನಡೆಯೋದಿಲ್ಲ. ಉಗ್ರಗಾಮಿಗಳನ್ನು ಮಾತ್ರವಲ್ಲದೆ ಉಗ್ರರಿಗೆ ಬೆಂಬಲ ಕೊಡುವುವರನ್ನೂ ಬಂಧಿಸಬೇಕು. ಈ ದೇಶಕ್ಕಾಗಿ ಬಜರಂಗದಳ ಸಂಘಟನೆ ಪ್ರಾಣ ಕೊಡಲೂ ಸಿದ್ದವಾಗಿದೆ. ಪೋಲೀಸರು ತಕ್ಷಣ ಈ ರೀತಿ ಮಾಡಿದವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಪ್ರತಿ ತಾಲೂಕಿನಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆ ಬಳಿಯ ಖಾಸಗಿ ಅಪಾರ್ಟ್ಮೆಂಟ್ ಗೋಡೆಯೊಂದರಲ್ಲಿ, “ನಮ್ಮನ್ನು ವಿದ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ ಲಷ್ಕರ್ ಇ ತೊಯಿಬಾ ಮತ್ತು ತಾಲಿಬಾನ್‌ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ” ಎಂದು ಬರೆಯಲಾಗಿತ್ತು. ಈ ಬರಹಗಳನ್ನು ಸಮಾಜಘಾತುಕರು, ಮಧ್ಯರಾತ್ರಿ ಬರೆದಿರಬಹುದು ಎಂದು ಶಂಕಿಸಲಾಗಿದ್ದು, ಘಟನೆಯು ತೀರ್ವ ಸ್ವರೂಪ ಪಡೆಯುವದನ್ನು ತಪ್ಪಿಸಲು ಕದ್ರಿ ಪೊಲೀಸರು ಗೋಡೆ ಬರಹಗಳನ್ನು ಅಳಿಸಿ ಹಾಕಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
