ಮಂಗಳೂರು : ಕದ್ರಿ ಪಾರ್ಕ್ ಗೆ ಬಂದಿದ್ದ ಅನ್ಯಕೋಮಿನ ಜೋಡಿ ಮೇಲೆ ಹಲ್ಲೆ ನಡೆಸಿದ್ದ ನಾಲ್ವರ ಬಂಧನ – Vshwanews24
ಮಂಗಳೂರು : ಕದ್ರಿ ಪಾರ್ಕ್ ಗೆ ಬಂದಿದ್ದ ಅನ್ಯಕೋಮಿನ ಜೋಡಿ ಮೇಲೆ ಹಲ್ಲೆ ನಡೆಸಿದ್ದ ನಾಲ್ವರ ಬಂಧನ
ಮಂಗಳೂರು : ಕದ್ರಿ ಪಾರ್ಕ್ ಗೆ ಬಂದಿದ್ದ ಅನ್ಯಕೋಮಿನ ಜೋಡಿ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಸಂಘಟನೆಯ ನಾಲ್ವರು ಕಾರ್ಯಕರ್ತರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಡಬದ ಯಶ್ವಿತ್, ಚಿಕ್ಕಮಗಳೂರಿನ ಶರತ್, ಅಳಪೆಯ ಧೀರಜ್, ಬಂಟ್ವಾಳದ ಅಭಿಜಿತ್ ಬಂಧಿತ ಆರೋಪಿಗಳು.
ಅವರು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಹೇಳಲಾಗಿದೆ. ಆರೋಪಿಗಳು ಬುಧವಾರ ಉತ್ತರ ಕರ್ನಾಟಕ ಮೂಲದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಇಸ್ರೋದಿಂದ SSLV-D2 ರಾಕೆಟ್ ಯಶಸ್ವಿ ಉಡಾವಣೆ : ಕಕ್ಷೆಗೆ ಸೇರಿದ ಮೂರು ಉಪಗ್ರಹಗಳು – Vishwanews24
ಅನ್ಯ ಸಮುದಾಯದ ಯುವಕ ಯುವತಿ ನಗರದ ಕದ್ರಿ ಪಾರ್ಕ್ ಗೆ ಆಗಮಿಸಿತ್ತು ಎಂದು ವರದಿಯಾಗಿದೆ. ಇದನ್ನು ಗಮನಿಸಿದ ಸಂಘಟನೆಯವರು ಅವರನ್ನು ಪ್ರಶ್ನಿಸಿ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಉತ್ತರ ಕರ್ನಾಟಕ ಮೂಲದ ಅನ್ಯಕೋಮಿನ ಜೋಡಿ ಕದ್ರಿ ಪಾರ್ಕ್ ಗೆ ಬಂದಿದ್ದು, ಇದನ್ನು ಪ್ರಶ್ನಿಸಿ ಸಂಘಟನೆ ಹಲ್ಲೆ ನಡೆದಿದೆ.
