ಮಂಗಳೂರು: ಕರಾವಳಿಯಲ್ಲಿ ಅಧಿಕ ಮಳೆಯ ವಾತಾವರಣ : ನ.21ರವರೆಗೆ ಮಳೆ ಮುಂದುವರಿಕೆ – Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಮಂಗಳೂರು: ಕರಾವಳಿಯಲ್ಲಿ ಅಧಿಕ ಮಳೆಯ ವಾತಾವರಣ : ನ.21ರವರೆಗೆ ಮಳೆ ಮುಂದುವರಿಕೆ – Vishwanews24

ಮಂಗಳೂರು : ಕರಾವಳಿಯಲ್ಲಿ ಮಳೆಯ ವಾತಾವರಣ ಮುಂದುವರಿದಿದ್ದು ನವೆಂಬರ್ 21 ರವರೆಗೆ ಅಧಿಕ ಮಳೆ ಸುರಿಯುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಂಗಳವಾರ ಮೋಡ ಬಿಸಿಲು ವಾತಾವರಣದೊಂದಿಗೆ ಹಲವೆಡೆ ಉತ್ತಮ ಮಳೆಯಾಗಿದೆ. ಮಂಗಳೂರು ಉಡುಪಿ ಜಿಲ್ಲೆಯ ವಿವಿಧ ಕಡೆ ಮಳೆಯಾಗಿದೆ.ಉಡುಪಿ, ಮಲ್ಪೆ, ಮಣಿಪಾಲ ನಗರದ ಸುತ್ತಮುತ್ತ ಬೆಳಗ್ಗೆಯಿಂದ ಜಿಟಿಜಿಟಿ ಮಳೆ ಸುರಿದಿದೆ. ಕಾಪು, ಪಡುಬಿದ್ರೆ, ಹೆಬ್ರಿ, ಮಾಳ, ಕಾರ್ಕಳ, ಬಜಗೋಳಿ ವ್ಯಾಪ್ತಿಯಲ್ಲಿಯೂ ಬಿಟ್ಟುಬಿಟ್ಟು ಉತ್ತಮ ವರ್ಷಧಾರೆ ಆಗಿದೆ.

ಕುಂದಾಪುರ ಬೈಂದೂರು ಕೊಲ್ಲೂರು ಸಿದ್ದಾಪುರ ಕೋಟೇಶ್ವರ ಭಾಗದಲ್ಲಿ ಹಗಲಿಡಿ ಮೋಡ ಕವಿದ ವಾತಾವರಣ ದೊಂದಿಗೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪುತ್ತೂರು ಸುಳ್ಯ ಮುಂತಾದ ಕಡೆ ಮಳೆಯಾಗಿದೆ.