Featured

ಮಂಗಳೂರು: ಕಾಂಗ್ರೆಸ್‌ ಪಕ್ಷವು ಯಾವುದೇ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಿಲ್ಲ : ಬಿ.ಕೆ.ಹರಿಪ್ರಸಾದ್‌

ಮಂಗಳೂರು: ಕಾಂಗ್ರೆಸ್‌ ಪಕ್ಷವು ಯಾವುದೇ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಿಲ್ಲ : ಬಿ.ಕೆ.ಹರಿಪ್ರಸಾದ್‌

ಮಂಗಳೂರು: ‘ಕಾಂಗ್ರೆಸ್‌ ಪಕ್ಷವು ಯಾವುದೇ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಿಲ್ಲ. ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಆಗಬಯಸುವವರು ತಮ್ಮ ಜಾತಿ ಸಂಘಟನೆ ಕಟ್ಟಿ, ಅದರ ಮೂಲಕವೇ ಆಸೆ ತೀರಿಸಿಕೊಳ್ಳಲಿ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಜಾತಿ ಧರ್ಮಗಳ ನಾಯಕರಿಗೂ ಅಧಿಕಾರದ ಕನಸು ಇದ್ದೇ ಇರುತ್ತದೆ. ಜಾತಿ ಧರ್ಮದ ಹೆಸರಿನಲ್ಲಿ ಕಾಂಗ್ರೆಸ್‌ ಯಾವತ್ತೂ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್‌ಗೆ ಬಹುಮತ ಬಂದರೆ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಪಕ್ಷದ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ’ ಎಂದರು.

‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಸಲುವಾಗಿ ಕೈಗೊಳ್ಳುವ ‘ಸಿದ್ದರಾಮೋತ್ಸವ’ ಪಕ್ಷದ ಕಾರ್ಯಕ್ರಮವಲ್ಲ. ಅವರ ಅಭಿಮಾನಿಗಳು ಸೇರಿ ನಡೆಸುವ ಕಾರ್ಯಕ್ರಮ. ಅದರ ವೆಚ್ಚವನ್ನೂ ಅಭಿಮಾನಿಗಳೇ ಭರಿಸುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತರಗತಿಗಳು ಆರಂಭವಾದ ಬಳಿಕವೂ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ತಲುಪಿಲ್ಲ. ರಷ್ಯಾ–ಉಕ್ರೇನ್‌ ಯುದ್ಧದಿಂದಾಗಿ ಕಾಗದ ಪೂರೈಕೆ ವ್ಯತ್ಯಯವಾಗಿದ್ದರಿಂದ ಪಠ್ಯ ಪುಸ್ತಕ ಮುದ್ರಣ ವಿಳಂಬವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನಮ್ಮಲ್ಲಿಗೆ ಕಾಗದ ಪೂರೈಕೆ ಆಗುವುದು ಕೆನಡಾದಿಂದ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಹೇಳಿಕೆ ಕೊಡುವ ಬದಲು ಸರ್ಕಾರ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಪಠ್ಯ ಪುಸ್ತಕ ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕಡಲ್ಕೊರೆತ ತಡೆಯಲು ಮುನ್ನೆಚ್ಚರಿಕೆ ವಹಿಸದ ಕಾರಣ ಉಳ್ಳಾಲ ಹಾಗೂ ಸುರತ್ಕಲ್‌ ಪ್ರದೇಶದಲ್ಲಿ ಈ ಬಾರಿ ಕಡಲ್ಕೊರೆತದ ಹಾವಳಿ ಹೆಚ್ಚಾಗಿದೆ. ಈ ಸಲ ಮಾನವ ನಿರ್ಮಿತ ತಪ್ಪುಗಳಿಂದಾಗಿಯೇ ಸಮಸ್ಯೆ ಉಂಟಾಗಿದೆ’ ಎಂದು ಬಿ.ಕೆ.ಹರಿಪ್ರಸಾದ್‌ ಆರೋಪಿಸಿದರು.

‘ಸ್ಮಾರ್ಟ್‌ ಸಿಟಿಯಾಗಿದ್ದ ಮಂಗಳೂರನ್ನು ದುರಂತಮಯ ನಗರವನ್ನಾಗಿ ಪರಿವರ್ತಿಸಿದ್ದಾರೆ. ಕಂಕನಾಡಿ– ಪಡೀಲ್‌ ಬಳಿ ಮಳೆನೀರು ರಸ್ತೆಯಲ್ಲೇ ನಿಲ್ಲುವ ಸಮಸ್ಯೆಯನ್ನೂ ಬಗೆಹರಿಸಿಲ್ಲ’ ಎಂದು ದೂರಿದರು.

ಪಕ್ಷದ ಮುಖಂಡರಾದ ಐವನ್‌ ಡಿಸೋಜ, ಜೆ.ಆರ್‌.ಲೋಬೋ, ಶಶಿಧರ್‌ ಹೆಗ್ಡೆ, ಶಾಹುಲ್‌ ಹಮೀದ್‌, ಟಿ.ಕೆ.ಸುಧೀರ್‌, ಅಬ್ದುಲ್‌ ರವೂಫ್‌, ಶಾಹುಲ್‌ ಹಮೀದ್‌, ನವೀನ್‌ ಡಿಸೋಜ, ನೀರಜ್‌ಪಾಲ್‌, ಶುಭೋದಯ ಆಳ್ವ ಮತ್ತಿತರರು ಇದ್ದರು.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

12 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

13 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

13 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

13 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

13 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

1 day ago