Featured

ಮಂಗಳೂರು : ಕಾನೂನುಬದ್ಧ ಮಾಂಸ ಸಾಗಾಟ ತಡೆದರೆ 10 ವರ್ಷ ಜೈಲು ಶಿಕ್ಷೆ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ – vishwanews24

ಮಂಗಳೂರು : ಕಾನೂನುಬದ್ಧ ಮಾಂಸ ಸಾಗಾಟ ತಡೆದರೆ 10 ವರ್ಷ ಜೈಲು ಶಿಕ್ಷೆ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ಗೋಹತ್ಯೆ ಹಾಗೂ ಕಾನೂನುಬಾಹಿರ ಜಾನುವಾರು ಸಾಗಾಟವನ್ನು ತಡೆಯಲು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು, ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

‘ತಲಪಾಡಿಯಿಂದ ಜೋಕಟ್ಟೆಗೆ ಅಕ್ರಮ ಗೋ ಸಾಗಾಟ ವಾಹನದ ಮಾಹಿತಿಯನ್ನು ಕಂಕನಾಡಿ ನಗರ ಪೊಲೀಸರಿಗೆ ನೀಡಿದ್ದರೂ ಪೊಲೀಸರು ನಿರ್ಲಕ್ಷಿಸಿದರು’ ಎಂದು ಮಂಗಳೂರು ಮಹಾನಗರ ಬಜರಂಗದಳ ಸಂಘಟನೆ ಸಾಮಾಜಿಕ ಜಾಲಾತಾಣದಲ್ಲಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ :

‘ಇದೊಂದು ಮಾಂಸ ಸಾಗಾಟ ಪ್ರಕರಣ. ಈ ಪ್ರಕರಣದಲ್ಲಿ ಮಾಂಸವನ್ನು ಕೇರಳದಿಂದ ಖರೀದಿಸಿ ನಗರದ ಪರವಾನಗಿ ಹೊಂದಿರುವ ಅಂಗಡಿಗೆ ತರಲಾಗಿತ್ತು. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧವಿದ್ದರೂ, ನಿಯಮಗಳ ಪ್ರಕಾರ ಕಾನೂನುಬದ್ಧ ಮಾಂಸ ಮಾರಾಟ ಮತ್ತು ಸಾಗಾಟಕ್ಕೆ ಇಲ್ಲಿ ಅವಕಾಶವಿದೆ. ಹೀಗಾಗಿ ವಾಹನವನ್ನು ತಡೆಯುವುದು, ದಾಳಿ ಮಾಡುವುದು ಅಥವಾ ಬೆದರಿಕೆ ಹಾಕುವುದು ಸೇರಿದಂತೆ ಯಾವುದೇ ಕಾನೂನುಬದ್ಧ ಕೆಲಸವನ್ನು ತಡೆಯಲು ಯತ್ನಿಸುವುದು ಕೂಡ ಅಪರಾಧ ಎಸಗಿದಂತಾಗುತ್ತದೆ. ಇಂತಹ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಸೋಮವಾರ ಬೆಳಗ್ಗೆ ಮಾಂಸ ಸಾಗಾಟ ವಾಹನವನ್ನು ತಡೆಯಲು ಯತ್ನಿಸಲಾಗಿದೆ ಎಂಬ ದೂರು ಬಂದಿದೆ. ಇದು ನೈಜ ಎಂದು ಕಂಡುಬಂದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ :

Vishwa News 24

Recent Posts

ಸೌಜನ್ಯಾ ಪ್ರಕರಣ: ಹಿಂದಿನ ತನಿಖಾಧಿಕಾರಿಗಳಿಗೆ ಎಸ್ಐಟಿ ನೋಟಿಸ್ – vishwanews24

ಸೌಜನ್ಯಾ ಪ್ರಕರಣ: ಹಿಂದಿನ ತನಿಖಾಧಿಕಾರಿಗಳಿಗೆ ಎಸ್ಐಟಿ ನೋಟಿಸ್ 15ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗಲು ಸೂಚನೆ ಮಂಗಳೂರು: ಧರ್ಮಸ್ಥಳದ…

51 seconds ago

ಮಂಗಳೂರು – ರಾಸ್ ಅಲ್ ಖೈಮಾ ನಡುವೆ ನೇರ ಸೇವೆ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ – vishwanews24

ಮಂಗಳೂರು - ರಾಸ್ ಅಲ್ ಖೈಮಾ ನಡುವೆ ನೇರ ಸೇವೆ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು: ಕರಾವಳಿಯ ಅಂತಾರಾಷ್ಟ್ರೀಯ…

31 minutes ago

ಉಡುಪಿ : ಪ್ರ ಧಾನಿಯವರ ತಂದೆಯ ಕುರಿತು ಖರ್ಗೆ ಹೇಳಿಕೆಗೆ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ : ಕಾಂಗ್ರೆಸ್ ವಿರುದ್ಧ ವಾಗ್ದಾಳಿ – vishwanews24

ಉಡುಪಿ :ಪ್ರಧಾನಿ ಮೋದಿಯವರ ತಂದೆಯ ಕುರಿತು ಖರ್ಗೆ ಹೇಳಿಕೆ ಕಾಂಗ್ರೆಸ್ ಹೀನ ಮನಸ್ಥಿತಿಗೆ ಕೈಗನ್ನಡಿ : ಯಶಪಾಲ್ ಸುವರ್ಣ ಆಕ್ರೋಶ…

37 minutes ago

ನನ್ನ ಹೃದಯದ ಬಾಗಿಲಲ್ಲಿ ದರ್ಶನ್  ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ : ಧನ್ವೀರ್ – vishwanews24

ನನ್ನ ಹೃದಯದ ಬಾಗಿಲಲ್ಲಿ ದರ್ಶನ್  ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ : ಧನ್ವೀರ್ ದರ್ಶನ್  ಹಾಗೂ…

48 minutes ago

KSRTC ಬಸ್‌–ಬೈಕ್‌ ಮುಖಾಮುಖಿ ಡಿಕ್ಕಿ : ನವವಿವಾಹಿತ ಸಾವು – vishwanews24

KSRTC ಬಸ್‌–ಬೈಕ್‌ ಮುಖಾಮುಖಿ ಡಿಕ್ಕಿ : ನವವಿವಾಹಿತ ಸಾವು ಚಿಕ್ಕಮಗಳೂರು: KSRTC ಬಸ್‌ ಹಾಗೂ ಬೈಕ್‌  ನಡುವೆ ಮುಖಾಮುಖಿ ಡಿಕ್ಕಿಸಂಭವಿಸಿ…

18 hours ago

ಹಾಸನಾಂಬ ಭಕ್ತರಿಗೆ ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್: ಅ. 30ರಿಂದ ವಿಶೇಷ ಟೂರ್ ಪ್ಯಾಕೇಜ್ ಆರಂಭ – vishwanews24

ಹಾಸನಾಂಬ ದರ್ಶನಕ್ಕೆ KSRTC ಗುಡ್ ನ್ಯೂಸ್: ಅ. 30ರಿಂದ ವಿಶೇಷ ಟೂರ್ ಪ್ಯಾಕೇಜ್ ಆರಂಭ ;ಟಿಕೆಟ್‌ ದರ, ವೇಳಾಪಟ್ಟಿ ಬಿಡುಗಡೆ…

20 hours ago