Featured

ಮಂಗಳೂರು: ಕುಕ್ಕರ್ ಬಾಂಬ್ ಸ್ಟೋಟ ಪ್ರಕರಣ : ಉಡುಪಿ ಮೂಲದ ವಿದ್ಯಾರ್ಥಿ ರಿಶಾನ್ ಸಹಿತ ಇಬ್ಬರು NIA ವಶಕ್ಕೆ – Vishwanews24

ಮಂಗಳೂರು: ಕುಕ್ಕರ್ ಬಾಂಬ್ ಸ್ಟೋಟ ಪ್ರಕರಣ : ಉಡುಪಿ ಮೂಲದ ವಿದ್ಯಾರ್ಥಿ ರಿಶಾನ್ ಸಹಿತ ಇಬ್ಬರು NIA ವಶಕ್ಕೆ

ಮಂಗಳೂರು: ಮಂಗಳೂರಿನಲ್ಲಿ ಉಗ್ರವಾದದ ಪರ ಗೋಡೆ ಬರಹ ಪ್ರಕರಣ, ಶಿವಮೊಗ್ಗದಲ್ಲಿ ಉಗ್ರಸಂಚು, ಪ್ರಾಯೋಗಿಕ ಬಾಂಬ್ ಸ್ಟೋಟ ನಡೆಸಿ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ನೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ನಗರದ ಹೊರವಲಯದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ರಿಶಾನ್ ಶೇಖ್ ಸಹಿತ ಇಬ್ಬರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ರಿಶಾನ್ ನೊಂದಿಗೆ ಶಿವಮೊಗ್ಗ ಜಿಲ್ಲೆಯ ಟಿಪ್ಪು ಸುಲ್ತಾನ್ ನಗರದ ಹುಜೈರ್ ಫರ್ಹಾನ್ ಬೇಗ್ ಎಂಬಾತನನ್ನೂ ಬಂಧಿಸಲಾಗಿದ್ದು, ಇನ್ನೋರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‍ಐಎ ತಿಳಿಸಿದೆ.

ಇನ್ನು ನಡುಪದವಿನ ಖಾಸಗಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ರಿಶಾನ್ ತಾಜುದ್ದೀನ್ ಶೇಖ್ ನನ್ನು ಎನ್‍ಐಎ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದಿದ್ದು, ಇವರಿಬ್ಬರೂ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಟೋಟ ನಡೆಸಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಮಾಝ್ ಮುನೀರ್ ಜತೆ ನೇರವಾಗಿ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ರಿಶಾನ್ ತನಗೆ ಮಾಝ್ ಮುನೀರ್ ನ ಪರಿಚಯವಿದೆ ಆದರೆ ಕುಕ್ಕರ್ ಬಾಂಬ್ ಸ್ಟೋಟದ ಆರೋಪಿ ಸಾರೀಕ್ ನ ಪರಿಚಯ ಇಲ್ಲ ಎಂದು ಹೇಳಿರುವುದಾಗಿ ಎನ್‍ಐಎ ತಿಳಿಸಿದೆ.

ಶಿವಮೊಗ್ಗ ಪ್ರಕರಣದಲ್ಲಿ ಸಯ್ಯದ್ ಯಾಸೀನ್ ಬಂಧನದ ಬಳಿಕ ಮಾಝ್ ಮುನೀರ್ ನನ್ನು ಬಂಧಿಸಿದ್ದು, ಇವರ ಸಹವರ್ತಿಯಾಗಿದ್ದು, ಮಂಗಳೂರಿನ ಗೋಡೆ ಬರಹ ಬರೆದಿದ್ದ ಶಾರೀಕ್ ಮಂಅಳೂರಿನಲ್ಲಿ ಇತ್ತೀಚೆಗೆ ಕುಕ್ಕರ್ ಬಾಂಬ್ ಸ್ಟೋಟದಲ್ಲಿ ಗಾಯಗೊಂಡು ಸಿಕ್ಕಿಬಿದ್ದು ಎನ್‍ಐಎ ವಶದಲ್ಲಿದ್ದಾನೆ.

ಇನ್ನು ಎನ್‍ಐಎ ಗುರುವಾರ ವಶಕ್ಕೆ ಪಡೇದಿರುವ ರಿಶಾನ್ ತಾಜುದ್ದೀನ್ ಶೇಖ್ ಶಂಕಿತ ಉಗ್ರ ಮಾಝ್ ಮುನೀರ್ ಸಂಪರ್ಕದಲ್ಲಿರುವುದರ ಹಿನ್ನಲೆಯಲ್ಲಿ ಎನ್‍ಐಎ ಅಧಿಕಾರಿಗಳು ಆತನಿಗಾಗಿ ಬಲೆ ಬೀಸಿದ್ದರು.

Vishwa News 24

Recent Posts

ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿ : ದೇಶಾದ್ಯಂತ ‘ಸೇವಾ ಸಂಕಲ್ಪʼ ಅಭಿಯಾನ – vishwanews24

ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿ ;  ದೇಶಾದ್ಯಂತ 1 ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ನವದೆಹಲಿ:…

14 minutes ago

ಪಣಂಬೂರು ಬೀಚ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಹೆಜಮಾಡಿ ಕೋಡಿಯಲ್ಲಿ ಪತ್ತೆ – vishwanews24

 ಪಣಂಬೂರು ಬೀಚ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಹೆಜಮಾಡಿ ಕೋಡಿಯಲ್ಲಿ ಪತ್ತೆ ಉಡುಪಿ: ಪಣಂಬೂರು ಬೀಚ್‌ನಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ…

24 minutes ago

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

21 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

21 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

22 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

22 hours ago