ಕಾಪು : ಕಾಪುವಿನಿಂದ ಎಂಟು ನಾಟಿಕಲ್ ಮೈಲಿ ದೂರದಲ್ಲಿ ಸಮುದ್ರದ ಮಧ್ಯದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಅಪಾಯದಲ್ಲಿದ್ದ ಮೀನುಗಾರಿಕಾ ಬೋಟ್’ ನಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿರುವ ಘಟನೆ ನಡೆದಿದೆ.
ಬಡನಿಡಿಯೂರಿನ ಭಾಸ್ಕರ್ ಎಂ. ಪುತ್ರನ್ ಎಂಬುವವರ ಒಡೆತನದ ಸ್ವರ್ಣಗೌರಿ ದೋಣಿ ಡಿ.30 ರಂದು ರಾತ್ರಿ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಜ.3ರಂದು ಕಾಪುವಿನಿಂದ ಎಂಟು ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಬಂಡೆಗೆ ತಾಗಿ ನೀರು ರಭಸವಾಗಿ ಹರಿಯಲಾರಂಭಿಸಿತ್ತು. ಹಲಗೆ ಹಾನಿಗೊಳಗಾದ ಕಾರಣ ದೋಣಿಯೊಳಗೆ ನೀರು ಬಂದಿದೆ. ಈ ವೇಳೆ ಸ್ವರ್ಣಗೌರಿ ದೋಣಿಯ ತಾಂಡೇಲಾ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವರುಣ ದೋಣಿಗೆ ಮಾಹಿತಿ ರವಾನಿಸಿದರು. ವರುಣ ದೋಣಿಯಲ್ಲಿದ್ದ ಮೀನುಗಾರರು ಸ್ವರ್ಣಗೌರಿ ದೋಣಿಯಲ್ಲಿದ್ದ ಸಿಬ್ಬಂದಿಯ ರಕ್ಷಣೆಗೆ ಧಾವಿಸಿ ಎಲ್ಲರನ್ನೂ ರಕ್ಷಿಸಿದರು. ಆದರೆ, ಬಂಡೆಗೆ ಡಿಕ್ಕಿ ಹೊಡೆದ ದೋಣಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಆದ್ದರಿಂದ ದೋಣಿಯಲ್ಲಿದ್ದ ಆರು ಸೆಟ್ ಬಲೆ, ಹಗ್ಗ, ಡ್ರಮ್ ವಿಂಚ್, ಇಂಜಿನ್ ಹಾಗೂ 2000 ಲೀಟರ್ ಡೀಸೆಲ್ ಸಮುದ್ರದಲ್ಲಿ ಕೊಚ್ಚಿ ಹೋಗಿವೆ. ಘಟನೆಯಿಂದ ಸುಮಾರು 30 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಜಿಟಲ್ ಜಗತ್ತಿಗೆ ತುಳು ಲಿಪಿಯ ಹೊಸ ಹೆಜ್ಜೆ: ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ ಮಂಗಳೂರು: ಕರಾವಳಿ ಕರ್ನಾಟಕದ ಹೆಮ್ಮೆಯ…
ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ ಶಿರ್ವ: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ…
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ನವದೆಹಲಿ: ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್…
ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ…
ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ…
ಅ.11 ರಿಂದ 20ರವರೆಗೆ ಮಂಗಳೂರು-ಉಡುಪಿ ಕೆಎಸ್‌ಆರ್‌ಟಿಸಿಯಿಂದ ದಸರಾ ಸ್ಪೆಷಲ್ ಟೂರ್ ಪ್ಯಾಕೇಜ್ ಮಂಗಳೂರು: ನವರಾತ್ರಿ ಹಾಗೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ…