ಮಂಗಳೂರು: ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಅಪ್ರಾಪ್ತ ಬಾಲಕಿಯ ಕೊಲೆ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಅಪ್ರಾಪ್ತ ಬಾಲಕಿಯ ಕೊಲೆ

ಮಂಗಳೂರು: ಬಾಲಕಿಯೊಬ್ಬಳ ಕುತ್ತಿಗೆಯನ್ನು ಬಟ್ಟೆಯಿಂದ ಬಿಗಿದು ಹತ್ಯೆ ಮಾಡಿರುವ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಜಂಕ್ಷನ್‌ನ ಭಜನ ಮಂದಿರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಬೆಳಗಾವಿ ಮೂಲದ ಬಾಲಕಿ ಜೋಕಟ್ಟೆಯ ಚಿಕ್ಕಪ್ಪ ಹನುಮಂತ ಅವರ ಮನೆಗೆ ಬಂದಿದ್ದಳು. ಕೂಲಿ ಕಾರ್ಮಿಕನಾಗಿರುವ ಹನುಮಂತ ಅವರು ನಿನ್ನೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಹನುಮಂತ ಅವರ ಕೊನೆಯ ಮಗ 8ನೇ ತರಗತಿಯಲ್ಲಿ ಓದುತ್ತಿದ್ದು, ಅವನು ಕೂಡ ಶಾಲೆಗೆ ಹೋಗಿದ್ದ. ಹನುಮಂತನ ಪತ್ನಿಯೂ ಊರಿಗೆ ಹೋಗಿದ್ದರಿಂದ ಮನೆಯಲ್ಲಿ ಬಾಲಕಿಯೊಬ್ಬಳೇ ಇದ್ದಳು ಎನ್ನಲಾಗಿದೆ.

ಮನೆ ಬದಲಿಸುವವರಿಗೆ ಗೃಹಜ್ಯೋತಿ ಅವಕಾಶ ; ಡಿ-ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ..vishwanews24

ಬಾಲಕಿಯು ಕೈ ನೋವಿಗೆ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆಯಷ್ಟೇ ಚಿಕ್ಕಪ್ಪನ ಮನೆಗೆ ಬಂದಿದ್ದಳು. ಇನ್ನು ಬಾಲಕಿಯ ತಾಯಿ ಮಗಳೊಂದಿಗೆ ಮಾತನಾಡಲು ಹನುಮಂತ ಅವರ ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾರೆ. ಈ ವೇಳೆ ಅವರು ಬಾಲಕಿಗೆ ಕರೆ ನೀಡಿದಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಪಕ್ಕದ ಮನೆಯವರು ಪೋನ್ ಕೊಡಲು ಬಾಲಕಿ ವಾಸವಿದ್ದ ಬಾಡಿಗೆ ಮನೆಗೆ ಬಂದಾಗ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಯಾರೋ ಕೊಲೆ ಮಾಡಿದ ರೀತಿ ಪತ್ತೆಯಾಗಿದ್ದಾಳು. ಪಕ್ಕದ ಮನೆಯವರು ತಾಯಿಗೆ ಪೋನಿನಲ್ಲಿ ವಿಷಯ ತಿಳಿಸಿದ್ದಾರೆ. ಕೂಡಲೇ ಮೃತ ಬಾಲಕಿಯ ತಾಯಿಯು ಹನುಮಂತನಿಗೆ ಪೋನ್ ಮೂಲಕ ಬಾಡಿಗೆ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ಹನುಮಂತನು ಬಾಡಿಗೆ ಮನೆಗೆ ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಡಿಸಿಪಿ ದಿನೇಶ್ ಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದು , ಪಣಂಬೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಿದ್ದಾರೆ.

ಮನೆ ಬದಲಿಸುವವರಿಗೆ ಗೃಹಜ್ಯೋತಿ ಅವಕಾಶ ; ಡಿ-ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ..vishwanews24

Leave a Reply