ಮಂಗಳೂರು ಕೋವಿಡ್-19 : ಜಿಲ್ಲೆಯಲ್ಲಿ  ಈಜು ಕೊಳಗಳನ್ನು ತೆರೆಯಲು ಹಾಗೂ ಗ್ರಾಹಕರಿಗೆ ಅಥವಾ ಸಾರ್ವಜನಿಕರಿಗೆ ಬಳಸಲು ಅವಕಾಶವಿಲ್ಲ: ಜಿಲ್ಲಾಧಿಕಾರಿ ಆದೇಶ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು ಕೋವಿಡ್-19 : ಜಿಲ್ಲೆಯಲ್ಲಿ  ಈಜು ಕೊಳಗಳನ್ನು ತೆರೆಯಲು ಹಾಗೂ ಗ್ರಾಹಕರಿಗೆ ಅಥವಾ ಸಾರ್ವಜನಿಕರಿಗೆ ಬಳಸಲು ಅವಕಾಶವಿಲ್ಲ: ಜಿಲ್ಲಾಧಿಕಾರಿ ಆದೇಶ -Vishwanews24

ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ 9 ರಂತೆ ಕಂಟೈನ್ ಮೆಂಟ್ ವಲಯದ ಹೊರಗೆ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಉದ್ದೇಶಕ್ಕಾಗಿ ಮಾತ್ರವೇ ಈಜುಕೊಳಗಳನ್ನು ತೆರೆಯಲು ಹಾಗೂ ಬಳಕೆ ಮಾಡಲು ಅವಕಾಶವಿರುತ್ತದೆ.

ಇದನ್ನು ಹೊರತುಪಡಿಸಿ ಯಾವುದೇ ಹೋಟೆಲ್/ ಲಾಡ್ಜ್/ ರೆಸಾರ್ಟ್ ಗಳಲ್ಲಿ ಈಜುಕೊಳಗಳನ್ನು ತೆರೆಯಲು ಹಾಗೂ ಗ್ರಾಹಕರಿಗೆ ಅಥವಾ ಸಾರ್ವಜನಿಕರಿಗೆ ಬಳಸಲು ಅವಕಾಶವಿರುವುದಿಲ್ಲ.

ಕೋವಿಡ್-19 ಸೋಂಕು ಹರಡುವು ದನ್ನು ತಡೆಗಟ್ಟುವ ನಿಟ್ಟುನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಜಿಲ್ಲೆಯಲ್ಲಿ ಯಾವುದೇ ಈಜುಕೊಳಗಳನ್ನು ಪ್ರಾರಂಭಿಸಲು ಜಿಲ್ಲಾಡಳಿತದ ಪೂರ್ವಾನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಿದ್ದಾರೆ.

ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಅಂತವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ 2020 ರನ್ವಯ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಮೀನಿನಲ್ಲಿ ಫಾರ್ಮಲಿನ್ ಬಳಕೆ ಇರುವುದು ಕಂಡುಬಂದಿಲ್ಲ: ಜಿಲ್ಲಾಧಿಕಾರಿ ಜಿ. ಜಗದೀಶ್ -Vishwanews24

ಬೆಂಗಳೂರಿನಲ್ಲಿ ಅಣುಕು ಕೊರೊನಾ ಲಸಿಕೆ ವಿತರಣೆ ಆರಂಭ -Vishwanews24

http://ಪುತ್ತೂರು : ಶಾಲೆಗೆಂದು ಮನೆಯಿಂದ ತೆರಳಿದ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ -Vishwanews24