Featured

ಮಂಗಳೂರು: ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಬಾಲಕ ಮೃತ್ಯು – vishwanews24

ಮಂಗಳೂರು: ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಬಾಲಕ ಮೃತ್ಯು

ಮಂಗಳೂರು: ನಗರದ ಜೆಪ್ಪು ಮಹಾಕಾಳಿಪಡ್ಪು ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಮೂಲತಃ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದ ಪ್ರಸಕ್ತ ಜೆಪ್ಪು ಮಹಾಕಾಳಿಪಡ್ಪುನಿರ್ಮಲ ನಗರದಲ್ಲಿ ವಾಸವಾಗಿದ್ದ ಕಣ್ಣನ ಗೌಡ ಎಂಬವರ ಪುತ್ರ ವರುಣ್ (15) ಮೃತಪಟ್ಟ ಬಾಲಕ.

ಎ.11ರಂದು ಮಹಾಕಾಳಿಪಡ್ಪಿಅಂಡರ್‌ಪಾಸ್ ಬಳಿಯ ಭಜನಾಮಂದಿರದ ಸಮೀಪ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಮಂದಿರದ ಛಾವಣಿ ಬಿದ್ದ ಬಾಲ್ ಹೆಕ್ಕಲು ಹೋದಾಗ ವಿದ್ಯುತ್ ತಂತಿ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ.

ವಾರದ ಹಿಂದೆಷ್ಟೇ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ವರುಣ್ ಫಲಿತಾಂಶದ ನಿರೀಕ್ಷೆಯಲ್ಲಿದ್ದ. ತಂದೆ ಕಣ್ಣನ ಗೌಡ ಮಹಾಕಾಳಿಪಡ್ಪುವಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದಾರೆ. ತಂದೆ-ತಾಯಿ, ಅಣ್ಣ ಮತ್ತು ಮೂರುವರೆ ವರ್ಷದ ತಂಗಿಯನ್ನು ವರುಣ್ ಅಗಲಿದ್ದಾರೆ.

Vishwa News 24

Recent Posts

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ – vishwanews24

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ ಬೆಂಗಳೂರು: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ…

22 hours ago

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ – vishwanews24

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಉಡುಪಿ: ಕೇಂದ್ರ ಸರಕಾರದ ಜನವಿರೋಧಿ…

23 hours ago

ಮಂಗಳೂರು: ಗಾಯಗೊಂಡ ತಾಯಿ, ಮಗುವನ್ನು ಆಸ್ಪತ್ರೆಗೆ ಸಾಗಿಸಿದ ಬಸ್ ಸಿಬ್ಬಂದಿ; ಮಾನವೀಯತೆಗೆ ಶ್ಲಾಘನೆ – vishwanews24

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ತಾಯಿ-ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್ ಸಿಬ್ಬಂದಿ.. ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ ಗಾಯಗೊಂಡ ತಾಯಿ,…

23 hours ago

ಮಂಗಳೂರು – ಸೂರತ್ ವಿಶೇಷ ರೈಲು ಇನ್ನು ಮುಂದೆ ವಾರಕ್ಕೆ ಎರಡು ದಿನ ನಿರಂತರ ಸಂಚಾರ – vishwanews24

ಮಂಗಳೂರು- ಸೂರತ್ ವಿಶೇಷ ರೈಲು ಇನ್ನು ಮುಂದೆ ವಾರಕ್ಕೆ ಎರಡು ದಿನ ನಿರಂತರ ಸಂಚಾರ ಉಡುಪಿ: ಮಂಗಳೂರು- ಸೂರತ್ ನಡುವೆ…

1 day ago

ಕೊಂಕಣ ರೈಲ್ವೇ: ಟಿಕೆಟ್ ತಪಾಸಣೆ ಕಾರ್ಯಾಚರಣೆ; 2025-26ರಲ್ಲಿ 27.68 ಕೋ.ರೂ. ದಂಡ ವಸೂಲಿ – vishwanews24

ಕೊಂಕಣ ರೈಲ್ವೇ: ಟಿಕೆಟ್ ತಪಾಸಣೆ ಕಾರ್ಯಾಚರಣೆ; 2025-26ರಲ್ಲಿ 27.68 ಕೋ.ರೂ. ದಂಡ ವಸೂಲಿ ಉಡುಪಿ: ಟಿಕೆಟ್ ಇಲ್ಲದೆ ಹಾಗೂ ಅನಧಿಕೃತವಾಗಿ…

1 day ago

ಯುವಕ ನಾಪತ್ತೆ : ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – vishwanews24

ಯುವಕ ನಾಪತ್ತೆ; ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಂಗಳೂರು: 23 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್…

1 day ago