ಮಂಗಳೂರು: ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ PWD ಕಿರಿಯ ಇಂಜಿನಿಯರ್ – Vishwanews24
ಮಂಗಳೂರು: ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ PWD ಕಿರಿಯ ಇಂಜಿನಿಯರ್
ಮಂಗಳೂರು: ನಗರದ ಬೋಂದೆಲ್ನಲ್ಲಿರುವ ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ರೊನಾಲ್ಡ್ ಲೋಬೋ ಗುತ್ತಿಗೆದಾರರೊಬ್ಬರಿಂದ ಲಂಚಕ್ಕೆ ಕೈಯೊಡ್ಡುವಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ಬೋಂದೆಲ್ನಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರವರ ಕಚೇರಿ ಲೋಕೋಪಯೋಗಿ ಇಲಾಖೆಯ ಗುಣ ಭರವಸೆ ಉಪವಿಭಾಗದ ಕಿರಿಯ ಇಂಜಿನಿಯರ್ -2 ಆಗಿರುವ ರೋನಾಲ್ಡ್ ಲೋಬೋ ಗುತ್ತಿಗೆದಾರರೊಬ್ಬರಿಂದ 20,000 ರೂ. ಲಂಚದ ಹಣ ಸ್ವೀಕಾರಿಸುತ್ತಿದ್ದ ವೇಳೆ ಇಂದು ಮಧ್ಯಾಹ್ನದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಆರೋಪಿ ಕಿರಿಯ ಇಂಜಿನಿಯರ್ ನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿ.ಎ.ಸೈಮನ್ ಮಾರ್ಗದರ್ಶನದಂತೆ ಬುಧವಾರ ಲಂಚದ ಹಣ ಸ್ವೀಕರಿಸುವ ವೇಳೆ ದಾಳಿ ನಡೆಸಿ ರೊನಾಲ್ಡ್ ಲೋಬೋನನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತದ ಪ್ರಕಟನೆ ತಿಳಿಸಿದೆ.

