ಮಂಗಳೂರು: ರಾಜ್ಯಾದ್ಯಂತ ಪಿಎಸ್ಐ ಹುದ್ದೆ ನೇಮಕಾತಿಯಲ್ಲಿನ ಅಕ್ರಮ ಭಾರೀ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ವಂಚನೆ ಬಯಲಾಗಿದೆ. ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಕೊಡಿಸುವುದಾಗಿ ಗಾಳ ಹಾಕಿದ ವಂಚಕರು ಹಾಸನ ಜಿಲ್ಲೆ ಆಲೂರಿನ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಕೃಷ್ಣ ಗೌಡ(66) ಎನ್ನುವವರಿಗೆ 40 ಲಕ್ಷ ರೂ. ವಂಚಿಸಿರುವ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ನಾಗಭೂಷಣ್, ವಾಮಂಜೂರಿನ ನಾರಾಯಣ ಸ್ವಾಮಿ, ಮೂಲ್ಕಿಯ ಮಹೇಶ್ ಭಟ್, ಮೂಡುಬಿದಿರೆಯ ದಿನೇಶ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೃಷ್ಣಗೌಡರ ಪುತ್ರ ಸಿ.ಕೆ.ದರ್ಶನ್ ಮತ್ತು ಬೆಂಗಳೂರಿನ ಮೊಹಮ್ಮದ್ ಶರೀಫ್ ಸೇರಿದಂತೆ ಹಲವರು ಬೆಂಗಳೂರಿನಲ್ಲಿ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ವೇಳೆ ಪರಸ್ಪರ ಪರಿಚಿತರಾಗಿದ್ದರು. 2019ರಲ್ಲಿ ದರ್ಶನ್ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಆ ವೇಳೆ ಮೊಹಮ್ಮದ್ ಶರೀಫ್, ತನ್ನ ನೆರೆಮನೆಯ ನಿರ್ಮಲಾ ವೆಂಕಟಸ್ವಾಮಿ ಎಂಬುವರ ಮನೆಯಲ್ಲಿ ಪೂಜೆಗೆ ಬರುತ್ತಿದ್ದ ಮೂಲ್ಕಿಯ ಮಹೇಶ್ ಭಟ್ ಎಂಬುವರ ಬಳಿ ಸರ್ಕಾರಿ ಹುದ್ದೆ ಪಡೆಯುವ ಬಗ್ಗೆ ಮಾತನಾಡಿದ್ದರು. ಆಗ ಮಹೇಶ್, ನನಗೆ ಸಿಬಿಐನಲ್ಲಿ ನಾರಾಯಣಸ್ವಾಮಿ ಎನ್ನುವವರ ಪರಿಚಯ ಇದೆ. ಅವರಿಗೆ ರಾಜಕೀಯದವರ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಪರಿಚಯ ಇದೆ, ಕೆಲಸ ಮಾಡಿಸಿಕೊಡುತ್ತಾರೆ ಎಂದಿದ್ದ.
ಅದರಂತೆ ಶರೀಫ್ ಹಾಗೂ ಇತರರು ಸಿಬಿಐ ಅಧಿಕಾರಿ ಸೋಗಿನಲ್ಲಿದ್ದ ನಾರಾಯಣಸ್ವಾಮಿಯನ್ನು ಮಹೇಶ್ ಮನೆಯಲ್ಲಿ ಭೇಟಿ ಮಾಡಿದ್ದರು. ಕೆಲಸ ಬೇಕಾದರೆ ಬೆಂಗಳೂರಿನ ನಾಗಭೂಷಣ್ ಹಾಗೂ ಮೂಡುಬಿದಿರೆಯ ದಿನೇಶ್ ಮೂಲಕ ಮಾತನಾಡಬೇಕು. ಆದರೆ ಅವರು ಹೇಳಿದಷ್ಟು ಹಣದ ವ್ಯವಸ್ಥೆ ಮಾಡಬೇಕು ಎಂದು ನಾರಾಯಣಸ್ವಾಮಿ ನಂಬಿಸಿದ್ದ. ಕೃಷ್ಣಗೌಡರು ಪುತ್ರನ ಕೆಲಸಕ್ಕಾಗಿ 8 ಲಕ್ಷ ರೂ.ವನ್ನು ನಾರಾಯಣಸ್ವಾಮಿಗೆ ನೀಡಿದ್ದರು. ಉದ್ಯೋಗದ ಆದೇಶ ಪ್ರತಿ ಕೇಳಿದಾಗ ಆರೋಪಿಗಳು ವಿಳಂಬವಾಗುತ್ತದೆ ಎಂದಿದ್ದರು. ಕೆಲ ಸಮಯದ ಬಳಿಕ ನಕಲಿ ಆದೇಶಪತ್ರ ತೋರಿಸಿದ್ದು, ಕೃಷ್ಣಗೌಡ ಮತ್ತೆ 32 ಲಕ್ಷ ರೂ. ನೀಡಿದ್ದರು. ನೇಮಕಾತಿ ಕುರಿತು ಕೇಳಿದಾಗ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…