ಮಂಗಳೂರು:  ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್‌ ಆಯುಕ್ತರ ದಿಢೀರ್‌ ದಾಳಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು:  ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್‌ ಆಯುಕ್ತರ ದಿಢೀರ್‌ ದಾಳಿ

ಮಂಗಳೂರು,: ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ರವಿವಾರ ಸುಮಾರು 300 ಪೊಲೀಸರ ತಂಡ ದಿಢೀರ್‌ ತಪಾಸಣೆ ನಡೆಸಿತು.

ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ನೇತೃತ್ವದಲ್ಲಿ ಮಧ್ಯಾಹ್ನ ಕೆಎಸ್‌ಆರ್‌ಪಿ ಹಾಗೂ ವಿವಿಧ ಠಾಣೆಗಳ ಅಧಿಕಾರಿ, ಸಿಬಂದಿ ಸುಮಾರು ಒಂದೂವರೆ ತಾಸು ತಪಾಸಣೆ ನಡೆಸಿದರು.

ತಂಬಾಕು ಉತ್ಪನ್ನಗಳು ಪತ್ತೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, “ಇಂಥ ದಿಢೀರ್‌ ಭೇಟಿಯನ್ನು ಆಗಿಂದಾಗ್ಗೆ ಮಾಡಲಾಗುವುದು. ತಪಾಸಣೆ ವೇಳೆ ಬೀಡಿ, ಸಿಗರೇಟು, ತಂಬಾಕು ಪತ್ತೆಯಾಗಿದೆ.

ಮಾದಕ ವಸ್ತು ಅಥವಾ ಬೇರೆ ವಸ್ತುಗಳು ಸಿಕ್ಕಿಲ್ಲ. ಕೈದಿಗಳು ಮೊಬೈಲ್‌ ಕರೆ ಮಾಡುತ್ತಿರುವ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಕಾರಾಗೃಹದಲ್ಲಿ ಕೆಎಸ್‌ಐಎಸ್‌ ಎಫ್(ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ) ಹಾಗೂ ಕಾರಾಗೃಹ ಅಧಿಕಾರಿಗಳು ನಿರಂತರ ವಾಗಿ ಸಮರ್ಪಕವಾಗಿ ತಪಾಸಣೆ ನಡೆಸುತ್ತಿದ್ದಾರೆ. ಕಾರಾಗೃಹ ಅಧೀಕ್ಷಕ ರೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ಇನ್ನೂ 3 ದಿನ ಗುಡುಗು ಸಹಿತ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ – Vishwanews24

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅಂಶುಕುಮಾರ್‌ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಕಾರಾಗೃಹದಲ್ಲಿ ರವಿವಾರ 400 ಪುರುಷರು, 8 ಮಹಿಳೆಯರು ಸಹಿತ ಒಟ್ಟು 408 ಮಂದಿ ವಿಚಾರಣಾಧೀನ ಕೈದಿಗಳಿದ್ದರು.

Leave a Reply