ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಆಯ್ಕೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಆಯ್ಕೆ

ಮಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲ್ಪಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು ಈ ಬಾರಿ ವಿವಿಧ ಕ್ಷೇತ್ರಗಳ 34 ಸಾಧಕರು ಮತ್ತು 20 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗಿದೆ. ಈ ಪೈಕಿ ಸಮಾಜ ಸೇವೆ ಕ್ಷೇತ್ರದ ವಿಭಾಗದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಆಯ್ಕೆಯಾಗಿದ್ದಾರೆ.

ತುಳುನಾಡ ರಕ್ಷಣಾ ವೇದಿಕೆಯು, ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ನೇತೃತ್ವದಲ್ಲಿ ಕಳೆದ 14 ವರ್ಷಗಳಿಂದ ನಿರಂತರವಾಗಿ ತುಳುನಾಡಿನ ನೆಲ, ಜಲ ಹಾಗೂ ತುಳುನಾಡಿನ ಆಚಾರ ವಿಚಾರ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಹೋರಾಟ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದೆ.

ಮಲ್ಪೆ: ಬಸ್ ಮತ್ತು ಬೈಕ್ ಅಪಘಾತ :- ದಂಪತಿಗಳಿಗೆ ಗಂಭೀರ ಗಾಯ – Vishwanews24

ಕೊವೀಡ್ 2ನೇ ಅಲೆಯ ಸಂದರ್ಭ ಮಂಗಳೂರಿನಲ್ಲಿ ನಿರಂತರವಾಗಿ 62 ದಿನಗಳ ಕಾಲ ಕೂಲಿ ಕಾರ್ಮಿಕರು ನಿರ್ಗತಿಕರಿಗೆ ಅನ್ನದಾನ ಸೇವೆ ಮಾಡಿದ ಕೀರ್ತಿ ಸಂಘಟನೆಗೆ ಸಲ್ಲುತ್ತದೆ.ಇವರ ಸೇವೆಯನ್ನು ಪರಿಗಣಿಸಿ 2020ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು, ಯುವ ಸಾಧಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತ್ತು. ಇದೀಗ ಪ್ರತಿಷ್ಠಿತ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗುಡ್ಡ ಪಾನರರಿಗೆ ಬಿಜೆಪಿ ಮುಖಂಡ ಶ್ರೀಶ ನಾಯಕ್ ರಿಂದ ಗೌರವರ್ಪಣೆ : vishwanews24 YOUTUBE LINk

 

 

Leave a Reply