ಮಂಗಳೂರು, : ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 5ರ ತನಕ ಲಾಕ್ ಡೌನ್ ಸಡಿಲಿಕೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು, : ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 5ರ ತನಕ ಲಾಕ್ ಡೌನ್ ಸಡಿಲಿಕೆ – Vishwanews24

ಮಂಗಳೂರು, : ದ.ಕ. ಜಿಲ್ಲೆಯಲ್ಲಿ ಕರ್ಫ್ಯೂ ಸಡಿಲಿಕೆಗೊಳಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಜುಲೈ 2ರಿಂದಲೇ ಹೊಸ ನಿಯಮ ಜಾರಿಯಾಗಲಿದ್ದು, ಬೆಳಗ್ಗೆ 6ರಿಂದ ಸಂಜೆ 5 ಗಂಟೆ ತನಕ ಕರ್ಫ್ಯೂ ಸಡಿಲಿಕೆಗೊಳಿಸಲಾಗಿದೆ.

ದ.ಕ. ಜಿಲ್ಲಾಡಳಿತದ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

ಹೋಟೇಲ್, ರೆಸ್ಟೋರೆಂಟ್, ಉಪಹಾರ ಗೃಹಗಳು, ಬಾರ್, ಕ್ಲಬ್ ಬೆಳಗ್ಗೆ 6ರಿಂದ ಸಂಜೆ 5ರ ತನಕ ಓಪನ್

ಶೇ. 50ರಷ್ಟು ಮಂದಿಗೆ ಕುಳಿತು ಆಹಾರ ಸೇವಿಸಲು ಅನುಮತಿ

ಬಾರ್, ಕ್ಲಬ್ ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶವಿಲ್ಲ

ಪಬ್ ಗಳು ಕಾರ್ಯ ನಿರ್ವಹಿಸಲು ಅವಕಾಶವಿಲ್ಲ

ಸಿನಿಮಾ, ಟೆವಿ ಸೀರಿಯಲ್ ಚಿತ್ರೀಕರಣಕ್ಕೆ ಅನುಮತಿ

ಜಾಗಿಂಗ್, ವಾಕಿಂಗ್ ಗಾಗಿ ಪಾರ್ಕ್ ಗಳು ಬೆ. ೫ರಿಂದ ಸಂಜೆ ೬ರ ತನಕ ಓಪನ್

ಜಿಮ್ ಗಳು ಶೇ. 50ರ ಸಾಮಾರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ

ಆಟೋ, ಟ್ಯಾಕ್ಸಿಗಳಲ್ಲಿ ಗರಿಷ್ಠ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶ

ಪ್ರೇಕ್ಷಕರಿಲ್ಲದೆ ಎಲ್ಲಾ ಹೊರಾಂಗಣ ಕ್ರೀಡೆಗಳಿಗೆ ಅನುಮತಿ

ಸರಕಾರಿ, ಖಾಸಗಿ ಕಚೇರಿಗಳು ಶೆ. 50 ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ

40 ಜನ ಮೀರದಂತೆ ಹಾಲ್ ಗಳಲ್ಲಿ ಮದುವೆಗೆ ಅನುಮತಿ

ಅಂತ್ಯ ಸಂಸ್ಕಾರ, ಶವಸಂಸ್ಕಾರಕ್ಕೆ 5 ಜನರಿಗಷ್ಟೇ ಅವಕಾಶ