ಮಂಗಳೂರು: ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣ : ಆರೋಪಿ ಪತ್ತೆಗೆ 7 ಪೊಲೀಸ್‌ ತಂಡ ರಚನೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣ : ಆರೋಪಿ ಪತ್ತೆಗೆ 7 ಪೊಲೀಸ್‌ ತಂಡ ರಚನೆ

ಮಂಗಳೂರು: ಹಂಪನಕಟ್ಟೆಯಲ್ಲಿರುವ ಜುವೆಲ್ಯರಿ ಅಂಗಡಿಯೊಂದರಲ್ಲಿ ಸಿಬ್ಬಂದಿ ರಾಘವೇಂದ್ರ ಆಚಾರ್ಯ (55) ಅವರನ್ನು ಹತ್ಯೆ ಮಾಡಿದ ಆರೋಪಿಯ ಪತ್ತೆಗೆ 7 ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

ಕೊಲೆ ಮಾಡಿರುವ ಆರೋಪಿಯ ಚಹರೆ ಸಿಸಿ ಕೆಮರಾದಲ್ಲಿ ದಾಖಲಾಗಿದ್ದರೂ ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗಿದ್ದು, ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಮೂಲ್ಕಿ: ಉಪನ್ಯಾಸಕಿ ನೇಣು ಬಿಗಿದು ಆತ್ಮಹತ್ಯೆ – Vishwanews24

ಇನ್ನು ಆರೋಪಿಯು ಜುವೆಲ್ಯರಿಯಿಂದ ಹೊರಗೆ ಬಂದ ಬಳಿಕ ಎರಡೆರಡು ರಿಕ್ಷಾಗಳಲ್ಲಿ ಹೋಗುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಆತ ಮೊದಲು ಹಂಪನಕಟ್ಟೆಯಿಂದ ವಲೆ ನ್ಸಿಯಾದವರೆಗೆ ಒಂದು ರಿಕ್ಷಾದಲ್ಲಿ ಸಾಗಿ, ಆ ಬಳಿಕ ಅಲ್ಲಿ ಇಳಿಯುತ್ತಾನೆ. ಮತ್ತೂಂದು ರಿಕ್ಷಾವನ್ನೇರಿ ಜೆಪ್ಪು ವರೆಗೂ ಹೋಗಿದ್ದಾನೆ. ಅಲ್ಲಿ ರಿಕ್ಷಾದಿಂದ ಇಳಿದು ರೈಲ್ವೇ ಹಳಿಯತ್ತ ತೆರಳಿದ್ದು, ಬಳಿಕ ಎಲ್ಲಿಗೆ ತೆರಲಿದ್ದಾನೆ ಎಂಬುದನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.

ಮೂಲ್ಕಿ: ಉಪನ್ಯಾಸಕಿ ನೇಣು ಬಿಗಿದು ಆತ್ಮಹತ್ಯೆ – Vishwanews24

Leave a Reply