ಮಂಗಳೂರು : ಟಯರ್ ಸ್ಪೋಟಗೊಂಡು ಕಾರಿನ ಮೇಲೆ ಬಸ್‌ ಪಲ್ಟಿ ಚಾಲಕ ಗಂಭೀರ ;16 ಮಂದಿಗೆ ಗಾಯ

Featured, ದಕ್ಷಿಣ ಕನ್ನಡ

ಮಂಗಳೂರು, : ಪುತ್ತೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಬಿಸಿ ರೋಡ್ ಕಡೆಗೆ ಚಲಿಸುತ್ತಿದ್ದ ಕಾರು ಡಿಕ್ಕಿಯಾಗಿ, ಬಸ್ ಪಲ್ಟಿಯಾದ ಘಟನೆ ನಗರದ ಅಡ್ಯಾರ್ ನ ಬರಾಕ್ ಸ್ಕೂಲ್ ಬಳಿ  ನಡೆದಿದೆ. ಘಟನೆಯಿಂದ ಕಾರು ಚಾಲಕ ಗಂಭೀರ ಗಾಯಗೊಂಡರೆ , ಬಸ್ ನಲ್ಲಿದ್ದ ಸುಮಾರು 16ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದೆ. ಇವರನ್ನು ನಗರ ಖಾಸಗಿ ಹಾಗೂ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ನ ಚಕ್ರವು ಸ್ಫೋಟಗೊಂಡ ಕಾರಣದಿಂದ ನಿಯಂತ್ರಣ ತಪ್ಪಿದ ಬಸ್ ರಸ್ತೆ ವಿಭಜಕದ ಮೇಲೆ ಹತ್ತಿ ಪಕ್ಕದಲ್ಲಿ ಚಲಿಸುತ್ತಿದ್ದ ಕಾರ್ ಗೆ ಢಿಕ್ಕಿ ಹೊಡೆದಿದೆ. ಬಸ್ ನಲ್ಲಿದ್ದ 16 ಮಂದಿ ಹಾಗೂ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನೆ ಬಳಿಕ ಸಂಚಾರ ದಟ್ಟಣೆಯುಂಟಾಗಿದ್ದು,ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು , ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಕಂಕನಾಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.