ಮಂಗಳೂರು : ತಮಿಳುನಾಡು ಮೂಲದ ಬೋಟ್‌ನಲ್ಲಿ ಸಿಲಿಂಡರ್ ಸ್ಪೋಟ ;11 ಮಂದಿ ಮೀನುಗಾರರ ರಕ್ಷಣೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ತಮಿಳುನಾಡು ಮೂಲದ ಬೋಟ್‌ನಲ್ಲಿ ಸಿಲಿಂಡರ್ ಸ್ಪೋಟ ;11 ಮಂದಿ ಮೀನುಗಾರರ ರಕ್ಷಣೆ -Vishwanews24

ಮಂಗಳೂರು,: ಮಂಗಳೂರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೂಲದ ಬೋಟ್‌ನಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಬೋಟ್‌ನಲ್ಲಿದ್ದ 11 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯವರು ರಕ್ಷಿಸಿದ್ದಾರೆ.

ಮಂಗಳೂರಿನಿಂದ ಸುಮಾರು 140 ನಾಟಿಕಲ್ ಮೈಲ್ ದೂರದಲ್ಲಿ ಈ ಬೋಟ್ ಮೀನುಗಾರಿಯಲ್ಲಿ ತೊಡಗಿತ್ತು. ಈ ವೇಳೆ ಬೋಟ್‌ನಲ್ಲಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿತ್ತು.

ವಿಷಯ ತಿಳಿದ ಕರಾವಳಿ ರಕ್ಷಣಾ ಪಡೆಯವರು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸಾಚೇತ್ ಹಾಗೂ ಸುಜಿತ್ ಎಂಬ ಕರಾವಳಿ ರಕ್ಷಣಾ ಪಡೆಯ ಬೋಟ್‌ಗಳು ನೆರವಾಗಿತ್ತು.

ಬೋಟ್‌ನಲ್ಲಿದ್ದ 11 ಮಂದಿಯ ಪೈಕಿ ಓರ್ವನಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

http://ಸಂಪುಟ ವಿಸ್ತರಣೆಗೆ ಹೈಕಮಾಂಡ್‌ ಸಮ್ಮತಿ: ಜ.13 ಅಥವಾ14ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ: ಸಿಎಂ ಬಿ.ಎಸ್.ವೈ -Vishwanews24