Featured

ಮಂಗಳೂರು : ತುಳುನಾಡಿನ ದೈವಾರಾಧನೆಯ ವೈಶಿಷ್ಟ್ಯತೆ ಬಿಂಬಿಸುವ ಕಾಂತಾರ ಸಿನಿಮಾ : ತೆರಿಗೆ ವಿನಾಯಿತಿ ಮಾಡುವಂತೆ ಸಿಎಂ ಗೆ ಮಿಥುನ್ ರೈ ಮನವಿ – Vishwanews24

ಮಂಗಳೂರು : ತುಳುನಾಡಿನ ದೈವಾರಾಧನೆಯ ವೈಶಿಷ್ಟ್ಯತೆ ಬಿಂಬಿಸುವ ಕಾಂತಾರ ಸಿನಿಮಾ – ತೆರಿಗೆ ವಿನಾಯಿತಿ ಮಾಡುವಂತೆ ಸಿಎಂ ಗೆ ಮಿಥುನ್ ರೈ ಮನವಿ

ಮಂಗಳೂರು: ಭಾರಿ ಯಶಸ್ಸು ಕಾಣುತ್ತಿರುವ ಕಾಂತಾರ ಚಿತ್ರವನ್ನು ತೆರಿಗೆ ವಿನಾಯಿತಿ ಮಾಡುವಂತೆ ದಕ್ಷಿಣ ಕನ್ನಡದ ಕಾಂಗ್ರೇಸ್‍ ನಾಯಕ ಮಿಥುನ್ ರೈ  ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.

ತನ್ನ ಫೇಸ್ಬುಕಲ್ಲಿ ಈ ಕುರಿತು ಬರೆದುಕೊಂಡಿರುವ ಮಿಥುನ್ ರೈ , ಇಡೀ ಜಗತ್ತಿನಲ್ಲಿ “ದೈವಾರಾಧನೆ”ಗೆ ಇವತ್ತು ಒಂದು ಪ್ರಮುಖವಾದ ಪ್ರಾಶ್ಯಸ್ತತೆ ಇದೆ, ಅದು ಹುಟ್ಟಿಕೊಂಡಿದ್ದು ನಮ್ಮ ತುಳುನಾಡಿನ ಮಣ್ಣಿನಲ್ಲಿ . ದೈವಾರಾಧನೆಗೆ ಜನರಿಗೆ ಇರುವ ಭಯ ಭಕ್ತಿ ಇವತ್ತು ಮಾಸುವಂತಹ ಸಂದಿಗ್ನ ಪರಿಸ್ಥಿತಿಗಳಲ್ಲಿ , ಒಂದು ಸಿನಿಮಾದ ಮುಖಾಂತರ ದೈವಾರಾಧನೆಯ ವಿಶಿಷ್ಟತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಜನರ ಮನಮುಟ್ಟಿಸುವ ಪ್ರಯತ್ನ ಇವತ್ತು “ಕಾಂತಾರ” ಚಿತ್ರದ ಮೂಲಕ ಫಲಿಸಿದೆ .

“#kanthara” ಚಲನಚಿತ್ರ … ಮಾತಿನಲ್ಲಿ ಎಷ್ಟು ಹೇಳಿದರೂ ಸಾಲದು … ಇದರ ಅಧ್ಬುತ ಪರಿಕಲ್ಪನೆಗ ಬಗ್ಗೆ ಶಬ್ದಗಳೇ ಬಾರದು ! ಸನ್ಮಾನ ಮುಖ್ಯಮಂತ್ರಿಗಳಲ್ಲಿ ವಿನಮ್ರತೆಯಿಂದ ಮನವಿ ಮಾಡುತ್ತಾ ಇದ್ದೇನೆ, “ಕಾಂತಾರ” ಚಲನಚಿತ್ರ ಪ್ರತಿ ಮನೆಮನೆಗೆ ಮುಟ್ಟಬೇಕು, ಈ ಚಿತ್ರಕ್ಕೆ ತೆರಿಗೆ ಮುಕ್ತ ಮಾಡಬೇಕು. ತುಳುನಾಡಿನ ದೈವಾರಾಧನೆಯ ಮಹತ್ವ ಸಮಸ್ತ ಕರ್ನಾಟಕದಲ್ಲಿ ತಿಳಿಯಬೇಕೆಂದು ಸಮಸ್ತ ತುಳುವೆರ ಕೋರಿಕೆ.

ತಳಮಟ್ಟದ ಬಿಜೆಪಿ ಕಾರ್ಯಕರ್ತೆ ಶ್ಯಾಮಲಾ ಕುಂದರ್‍ಗೆ ಈ ಬಾರಿ ಎಂಎಲ್‍ಎ ಟಿಕೆಟ್ ಫಿಕ್ಸ್ ಆಂತರಿಕ ಸಮೀಕ್ಷೆ vishwanews24

ತುಳುನಾಡಿನ ದೈವಾರಾಧನೆಯ ವೈಶಿಷ್ಟ್ಯತೆಯನ್ನು ಬಿಂಬಿಸುವ ಜತೆಗೆ ಆರಾಧನೆಯ ಮಹತ್ವವನ್ನು ಸಾರಿ ಹೇಳಿದ ‘ಕಾಂತಾರ’ ಸಿನಿಮಾ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ದೈವಾರಾಧನೆ ಮತ್ತು ನಂಬಿಕೆಯನ್ನು ಎಳೆಎಳೆಯಾಗಿ ಪ್ರಸ್ತುಪಡಿಸುವ ಮೂಲಕ ಯುವಸಮಾಜದಲ್ಲಿ ಮತ್ತಷ್ಟು ನಂಬಿಕೆ ಜಾಗೃತಿಗೊಳಿಸಿದೆ.

ಈ ಸಿನಿಮಾವನ್ನು Chief Minister of Karnataka ವೀಕ್ಷಣೆ ಮಾಡಬೇಕು ಮತ್ತು ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ನೀಡಬೇಕು ಎಂಬುವುದು ಸರ್ವ ತುಳುನಾಡಿಗರ ಪರವಾಗಿ ಆಗ್ರಹ. Rishab Shetty Films ಹಾಗೂ ಅವರ ತಂಡ ಕರಾವಳಿ ಭಾಗದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪರಂಪರೆಯ ಕುರಿತು ಸಮಗ್ರವಾಗಿ ವೇದಿಕೆ ತರುವಲ್ಲಿ ಯಶಸ್ವಿಯಾಗಿ ದುಡಿದಿರುವುದು ಶ್ಲಾಘನೀಯವಾದದ್ದು ಈ ಒಂದು ಚಲನಚಿತ್ರವನ್ನು ಮನೋರಂಜನ ದೃಷ್ಟಿಯಲ್ಲಿ ನೋಡದೆ ಸಮಾಜದ ಎಲ್ಲಾ ಜನರು ಇದು ಇತಿಹಾಸದ ಕುರಿತು ಒಂದು ಅವಲೋಕನ ಎಂಬಂತೆ ಎಲ್ಲರೂ ವೀಕ್ಷಣೆ ಮಾಡಬೇಕು ಎನ್ನುವುದು ನನ್ನ ಕೋರಿಕೆ.

ಡೋಪಿಂಗ್ ಟೆಸ್ಟ್​ನಲ್ಲಿ ಸಿಕ್ಕಿಬಿದ್ದ ಭಾರತದ ಅಗ್ರಮಾನ್ಯ ಜಾವೆಲಿನ್​ಪಟು..ಶಿವಪಾಲ್​ ಸಿಂಗ್​ಗೆ 4 ವರ್ಷ ಅಮಾನತು ಶಿಕ್ಷೆ – Vishwanews24

ನಿಮ್ಮ ಈ ಚಲನಚಿತ್ರ ಇತಿಹಾಸದ ಮೈಲುಗಲ್ಲನ್ನು ನಿರ್ಮಾಣ ಮಾಡುವಂತಾಗಲಿ ಮುಂದಿನ ಜನಾಂಗಕ್ಕೆ ಉತ್ತಮ ಸಂದೇಶವನ್ನು ತಲುಪಿಸುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಮಿಥುನ್ ರೈ ತನ್ನ ಫೇಸ್ಬುಕಲ್ಲಿ ಬರೆದುಕೊಂಡಿದ್ದಾರೆ. ವಿಜಯ ಕಿರಗಂದೂರು ರವರ ಹೊಂಬಾಳೆ ಬ್ಯಾನರಿನಡಿ ನಿರ್ಮಾಣವಾದ ರಿಷಭ್ ಶೆಟ್ಟಿ ನಟನೆಯ ಕಾಂತಾರ ಚಿತ್ರ ಭಾರಿ ಯಶಸ್ಸು ಕಾಣುತ್ತಿದೆ.

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

2 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

2 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago