Featured

ತಳಮಟ್ಟದ ಬಿಜೆಪಿ ಕಾರ್ಯಕರ್ತೆ ಶ್ಯಾಮಲಾ ಕುಂದರ್‍ಗೆ ಈ ಬಾರಿ ಎಂಎಲ್‍ಎ ಟಿಕೆಟ್ ಫಿಕ್ಸ್:ಆಂತರಿಕ ಸಮೀಕ್ಷೆ vishwanews24

ತಳಮಟ್ಟದ ಬಿಜೆಪಿ ಕಾರ್ಯಕರ್ತೆ ಶ್ಯಾಮಲಾ ಕುಂದರ್‍ಗೆ ಈ ಬಾರಿ ಎಂಎಲ್‍ಎ ಟಿಕೆಟ್

ಫಿಕ್ಸ್:ಆಂತರಿಕ ಸಮೀಕ್ಷೆ

ಪೊಲಿಟಿಕಲ್ ಬುಲೆಟಿನ್:vishwanews24

ಚುನಾವಣೆಯ ಪರ್ವ ಜೋರಾಗಿದೆ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಗದ್ದಿಗೆ ಏರಲು ಕೇಸರಿ ಪಾಳಯ ಹೈ ಪಾಯಿಂಟ್ ಸ್ಟ್ರೇಟಜಿ ಕೆಲಸ ಮಾಡುತ್ತಿದೆ ಈ ಮಧ್ಯ ಕರಾವಳಿಯಲ್ಲಿ ಹೊತ್ತಿಕೊಂಡಿರುವ ಬಿಜೆಪಿ ವಿರೋಧಿ ಅಲೆಯನ್ನು ತಣ್ಣಗೆಗೊಳಿಸಲು ಸಂಘ – ಬಿಜೆಪಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಕಾರ್ಯಕರ್ತರ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡುತ್ತಿದೆ ಮತ್ತು ಸಿಂಪಥಿ ವೋಟ್ ಗಿಟ್ಟಿಸಿಕೊಳ್ಳಲು ಕೂಡ ಪ್ರಯತ್ನ ಮಾಡುತ್ತಿದೆ.ಹಾಗಾಗಿ ಉಡುಪಿ ಅಥಾವ ದ.ಕ ಜಿಲ್ಲೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಗೆ ಮಣೆ ಹಾಕಲು ಬಿಜೆಪಿ ಒಂದು ಸುತ್ತಿನ ಪ್ಲ್ಯಾನಿಂಗ್ ಮುಗಿಸಿದೆಂಬ ಮಾಹಿತಿ ಲಭ್ಯವಾಗಿದೆ.


ಹಾಗದರೇ ಆ ಮಹಿಳೆ ಯಾರೆಂಬುದರ ಬಗ್ಗೆ ಸರ್ವೆ ಇಳಿದ ತಂಡಕ್ಕೆ ಕೇಳಿ ಬಂದ ಹೆಸರು ಶ್ಯಾಮಲಾ ಕುಂದರ್ , ಬಿಜೆಪಿಯಲ್ಲಿ ತಳಮಟ್ಟದಿಂದ ವಿವಿಧ ಜವಬ್ದಾರಿಗಳನ್ನು ನಿರ್ವಹಿಸಿದವರು ಬಕೆಟ್ ಪೊಲಿಟಿಕ್ಸ್‍ನಿಂದ ದೂರವಿದ್ದು ಕಾರ್ಯಕರ್ತರ ಜತೆಗೆ ನಿಂತು ಹೋರಾಟ ನಡೆಸಿದವರ ಪೈಕಿ ಈಕೆಯೂ ಕೂಡ ಒಬ್ಬರಾಗಿದ್ದು ಸದ್ಯ ಮತ್ತೆ ಭಾಜಪದ ಕೆಲಸ ಕಾರ್ಯದಲ್ಲಿ ಸಕ್ರಿಯರಾಗಿರುವ ಕುಂದರ್ ಗೆ ಬಿಜೆಪಿ ಟಿಕೆಟ್ ನೀಡುವ ಕುರಿತಾಗಿ ಸಿದ್ಧತೆ ನಡೆಸುತ್ತಿದೆಂಬ ಸುದ್ದಿ ರಾಜ್ಯ ಬಿಜೆಪಿ ನಾಯಕರ ಪಾಳಯದಲ್ಲಿ ಕೇಳಿ ಬರುತ್ತಿದೆ.


ಸಂಘದ ಹಿರಿಯರ ಜತೆ ನಿಕಟ ಸಂಪರ್ಕ ಮತ್ತು ರಾಜ್ಯ ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಒಡನಾಟವಿರುವ ಶ್ಯಾಮಲ ಕುಂದರ್ ಅವರಿಗೆ ಟಿಕೆಟ್ ನೀಡಿದಲ್ಲಿ ಕರಾವಳಿಯಲ್ಲಿ ಭುಗಿಳೆದ್ದಿರುವ ಮೆನ್ ಗ್ಯಾಂಗ್ ಪಾಲಿಟಿಕಲ್ ಡ್ರಾಮಕ್ಕೆ ಬ್ರೇಕ್ ಹಾಕಬಹುದೆಂಬ ಚರ್ಚೆಯೂ ನಡೆದಿದೆ ಎನ್ನಲಾಗಿದೆ.


ಶ್ಯಾಮಲ ಕುಂದರ್ ಮೂಲತಃ ಉಡುಪಿ ಜಿಲ್ಲೆಯ 80ನೇ ಬಡಗುಬೆಟ್ಟು ಗ್ರಾಮದವರು ಸುಮಾರು 20 ವರ್ಷಗಳ ಹಿಂದೆಯೇ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜಿಲ್ಲಾ ಹಾಗೂ ರಾಜ್ಯ ಮಹಿಳಾಮೋರ್ಚದ ಮತ್ತು ವಿವಿಧ ಸ್ತರದ ಜವಬ್ದಾರಿ ವಹಿಸಿ ಪಕ್ಷ ಕಟ್ಟುವಲ್ಲಿ ಅವಿರತ ಶ್ರಮ ವಹಿಸಿದ ಮೂಲ ಬಿಜೆಪಿ ಕಾರ್ಯಕರ್ತೆ.


ಇವರ ಕಾರ್ಯ ಚಟುವಟಿಕೆಯ ಬಗ್ಗೆ ನಿಗಾ ವಹಿಸಿದ್ದ ಕೇಂದ್ರ ಸರ್ಕಾರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯನ್ನಾಗಿ ಕೂಡ ಮಾಡಿತ್ತು. ತಳ ಮಟ್ಟದ ಕಾರ್ಯಕರ್ತರ ಜತೆಗೆ ಇಂದಿಗೂ ನಿಕಟ ಸಂಪರ್ಕವಿಟ್ಟುಕೊಂಡಿರುವ ಶ್ಯಾಮಲಾ ಕುಂದರ್ ಅವರಿಗೆ ಎಂ.ಎಲ್.ಎ ಟಿಕೆಟ್ ಫಿಕ್ಸ್ ಆಗಿರುವುದಂತೂ ಒಂದು ಲೆಕ್ಕಚಾರದಲ್ಲಿ ಕನ್ಫರ್ಮ್.


ಹಾಗದರೇ ಶ್ಯಾಮಲಾ ಕುಂದರ್ ಅವರನ್ನು ಯಾವ ಕ್ಷೇತ್ರಕ್ಕೆ ಕೊಡಬಹುದೆಂಬ ಪ್ರಶ್ನೆ ಸದ್ಯ ಎದ್ದಿರುವಂತದ್ದು ಜಿಲ್ಲೆಯಲ್ಲಿ ಐದು ಕಡೆಯೂ ಕೂಡ ಹೊಸ ಮುಖಗಳಿಗೆ ಮಣೆಹಾಕಬೇಕೆಂದು ಬಿಜೆಪಿಗೆ ಮನಸ್ಸಿದ್ದರೂ ಕೂಡ ಕುಂದಾಪುರದಂತಹ ಕ್ಷೇತ್ರದಲ್ಲಿ ಬಿಜೆಜಿ ಕಡ್ಡಿ ಅಲ್ಲಾಡಿಸುವ ಪ್ರಯತ್ನ ವಿಫಲ ಸಾಧ್ಯತೆಯಿದೆ ಹಾಗಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಅಚ್ಚರಿಯ ಆಯ್ಕೆ ನಡೆದರೂ ಅನುಮಾನವಿಲ್ಲ, ಕಾರಣ ಸದ್ಯ ಸಚಿವನಾಗಿರುವ ಸುನೀಲ್ ಕುಮಾರ್ ಬೆಂಗಳೂರಿನ ರಾಜಾಜಿನಗರಕ್ಕೆ ಕಣ್ಣಿಟ್ಟಿದ್ದು ಹಾಲಿ ಇರುವ ಶಾಸಕ ಸುರೇಶ್ ಕುಮಾರ್ ಈ ಸಲ ನಿವೃತಿಯಾಗುವ ಮಾಹಿತಿ ನೀಡಿದ್ದಾರೆ ಹಾಗಾಗಿ ಭಾಷಣಗಳ ಸರದಾರ ಸುನಿಲ್ ಆ ಕ್ಷೇತ್ರ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಮತ್ತು ರಾಜ್ಯ ಕೋರ್ ಕಮಿಟಿ ಸೇರದಂತೆ ಬಿ.ಎಲ್ ಸಂತೋಷ್ ಅವರ ಗಮನಕ್ಕೂ ತರುವ ಪ್ರಯತ್ನ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ, ಕಾರ್ಕಳ ಕ್ಷೇತ್ರದಲ್ಲಿ ಸುನೀಲ್ ಕುಮಾರ್ ಹೊರತು ಪಡಿಸಿ ದ್ವಿತೀಯ ಹಂತದ ನಾಯಕರಿಗೆ ಕೊರತೆಯಿರುವ ಕಾರಣ ಮತ್ತು ಬಿಜೆಪಿ ವೋಟ್ ಬ್ಯಾಂಕಿರುವ ಕ್ಷೇತ್ರವಾಗಿರುವುದರಿಂದ ಅಲ್ಲಿ ಕುಂದರ್ ಅವರಿಗೆ ಮಣೆಹಾಕುವ ಸಾಧ್ಯತೆಯೂ ಹೆಚ್ಚಾಗಿದೆ.


ಶ್ಯಾಮಲ ಕುಂದರ್ ಬಗ್ಗೆ ಯಾವುದೇ ನೆಗೆಟಿವ್ ಕಮೆಂಟ್ಸ್ ಇಲ್ಲದಿರುವುದು ಮತ್ತು ಪಕ್ಷ ಸಂಘಟನೆಯ ವಿಚಾರದಲ್ಲಿ ರಾಜೀ ಮಾಡಿಕೊಳ್ಳದೆ ಯಾವುದೇ ಶಾಸಕ ಸಂಸದರ ಗುತ್ತಿಗೆ ಕೆಲಸಕ್ಕೆ ಮೂಗು ತೂರಿಸಿಕೊಳ್ಳದೆ ಜವಬ್ದಾರಿವಹಿಸಿದ ಮಹಿಳೆ ಮತ್ತು ಸದ್ಯ ಜಿಲ್ಲೆಯಲ್ಲಿರುವ ಮಹಿಳಾತಂಡದಲ್ಲಿ ಅಳೆದುತೂಗಿದರು ಯಾರೋಬ್ಬರು ಕೂಡ ಶಾಸಕ ಸಂಸದೆಯಾಗುವ ಲಕ್ಷಣಗಳು ಅತ್ಯಂತ ವಿರಳವಾಗಿದೆ ಮತ್ತು ಒಂದೊಂದು ಜಾತಿಗೆ ಸೀಮಿತವಾದ ನಾಯಕಿಯರೇ ಜಾಸ್ತಿಯಾಗಿರುವ ಪರಿಣಾಮ ಈ ಬೆಳವಣಿಗೆ ಎನ್ನಲಾಗುತ್ತಿದೆ.


ಕಾಂಗ್ರೇಸ್ ಹಾಗೂ ಜೆಡಿಎಸ್ ನಿಂದ ಬಂದವರಿಗಿಂತ ಸಂಘ – ಬಿಜೆಪಿಯಲ್ಲಿ ಬಂದವರಿಗೆ ಕರಾವಳಿಯಲ್ಲಿ ಟಿಕೆಟ್ ನೀಡುವುದು ಸೂಕ್ತವೆಂಬುದು ಸರ್ವೆಯಲ್ಲಿಜನಸಾಮಾನ್ಯರು ನೀಡಿರುವ ಅಭಿಪ್ರಾಯವಾಗಿದ್ದು ಅದೇ ರೀತಿ ಬಿಜೆಪಿ ಮುಂದುವರಿಯಬಹುದು.


ಉಡುಪಿ ಜಿಲ್ಲೆಯಲ್ಲಿ ಒಂದು ಸುತ್ತಿನ ಸರ್ವೇ ಕಾರ್ಯ ಪೂರ್ಣವಾಗಿ ಮುಗಿದಿದ್ದು ಹಳೆ ನಾಯಕರ ಜತೆಗೆ ವಿವಿಧ ಪರಿವಾರದ ಸಂಘಟನೆಯ ಹೊಸ ಕಾರ್ಯಕರ್ತರಿಗೂ ಕೂಡ ಮಣೆಹಾಕಬೇಕೆಂದು ಒತ್ತಾಯ ಕೇಳಿ ಬಂದ ಪರಿಣಾಮವಾಗಿ ಯುವಮೋರ್ಚ-ಬಜರಂಗದಳ -ಜಾಗರಣ-ಅಭಾವಿಪದ ಸಕ್ರಿಯ ಕಾರ್ಯಕರ್ತರ ಪಟ್ಟಿ ಕೂಡ ಕೋರ್ ಕಮಿಟಿ ಕೈ ಸೇರಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ ಈ ಸಲ ಕರಾವಳಿಯಲ್ಲಿ ಪರುಷರ ಗ್ಯಾಂಗ್ ಪಾಲಿಟಿಕ್ಸ್‍ಗೆ ಕಡಿವಾಣ ಹಾಕಲು ಮಹಿಳಾ ಅಭ್ಯರ್ಥಿಯನ್ನು ಒಂದು ಕಡೆಯಾದರೂ ಬಿಜಪಿ ಸ್ಪರ್ಧೆಗಿಳಿಸುವುದು ಖಚಿತ.
ಪೊಲಿಟಿಕಲ್ ಬ್ಯುರೋ ವಿಶ್ವನ್ಯೂಸ್24

Vishwa News 24

Recent Posts

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

7 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

8 hours ago

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ – vishwanews24

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ  ಬೆಂಗಳೂರು: ಕರ್ನಾಟಕ ಸರ್ಕಾರದ…

8 hours ago

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ – vishwanews24

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…

8 hours ago

ಮಂಗಳೂರು:ಕೋರಿಯರ್ ಮೂಲಕ ಎಂಡಿಎಂಎ ಸಾಗಾಟದ ಜಾಲ ಪತ್ತೆ: ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ – vishwanews24

ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…

8 hours ago

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ – vishwanews24

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…

8 hours ago