Featured

ಮಂಗಳೂರು: ‘ತುಳು ಭಾಷೆಗೆ ರಾಜ್ಯದ ಅಧಿಕೃತ ಮಾನ್ಯತೆ ಕೊಡಿಸುತ್ತೇವೆ’ – ತುಳುವಿನಲ್ಲಿ ನಳಿನ್‌‌ ಕಟೀಲ್ ಟ್ವೀಟ್‌ – Vishwanews24

ಮಂಗಳೂರು: ‘ತುಳು ಭಾಷೆಗೆ ರಾಜ್ಯದ ಅಧಿಕೃತ ಮಾನ್ಯತೆ ಕೊಡಿಸುತ್ತೇವೆ’ – ತುಳುವಿನಲ್ಲಿ ನಳಿನ್‌‌ ಕಟೀಲ್ ಟ್ವೀಟ್‌ – Vishwanews24

ಮಂಗಳೂರು : ತುಳು ಭಾಷೆಯನ್ನು ಕರ್ನಾಟಕ ಹಾಗೂ ಕೇರಳ ಸರ್ಕಾರದ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ತುಳು ಭಾಷಿಗರಿಂದ ಟ್ವಿಟ್ಟರ್‌ ಅಭಿಯಾನ ಪ್ರಾರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡಾ ಈ ಅಭಿಯಾನಕ್ಕೆ ಪ್ರತಿಕ್ರಿಯಿಸಿದ್ದು, “ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ” ಎಂದು ತುಳುವಿನಲ್ಲಿ ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಡಿರುವ ಅವರು, “ಪೆದ್ದ್ ತಾಂಕಿದಿನ ಅಪ್ಪೆ ಲೆಕ ಮಟ್ಟೆಲ್ ಡ್ ಮಾನಾಯಿನ ಅಪ್ಪೆ ಬಾಸೆಗ್ ರಾಜ್ಯ ಬಾಸೆದ ಮಾನಾದಿಗೆ ತಿಕ್ಕೊಡು ಪನ್ಪಿನ ಪೊರಂಬಾಟಗ್ ಎನ್ನ ಬೆರಿಸಾಯ ಉಂಡು. ತುಲು ಬಾಸೆನ್ 8ನೇ ಪರಿಚ್ಛೇದಗ್ ಸೇರ್ಪಾವರೆ ಸರಕಾದೊಟ್ಟುಗು ಪಾತೆರಕತೆ ಆವೊಂದುಂಡು. ಒಂಜಾತ್ ತಾಂತ್ರಿಕ ದೋಷಲೆನ್ ಸರಿ ಮಲ್ತ್ದ್ ನಮ್ಮ ಅವಧಿಡ್ ತುಲು ಬಾಸೆಗ್ ರಾಜ್ಯದ ಅಧಿಕೃತ ಬಾಸೆ ಪನ್ಪುನ ಮಾನಾದಿಗೆ ಕೊರ್ಪಾವ ( ಹೆತ್ತ ತಾಯಿಯ ರೀತಿ ಇರುವ ನಮ್ಮ ಮಾತೃಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ಸಿಗಬೇಕು ಎನ್ನುವ ಹೋರಾಟಕ್ಕೆ ನನ್ನ ಬೆಂಬಲವೂ ಇದೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ. ಒಂದಿಷ್ಟು ತಾಂತ್ರಿಕ ದೋಷಗಳನ್ನು ಸರಪಡಿಸಿ ನಮ್ಮ ಆಡಳಿತದ ಅವಧಿಯಲ್ಲೇ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ ಎನ್ನುವ ಮಾನ್ಯತೆಯನ್ನು ಕೊಡಿಸುತ್ತೇವೆ)” ಎಂದು ತಿಳಿಸಿದ್ದಾರೆ.

“ತುಳು ರಾಜ್ಯದ ಆಡಳಿತಾತ್ಮಕ ಭಾಷೆ ಆಗಬೇಕು, ತುಳುವಿಗೆ ವಿಶೇಷ ಮಾನ್ಯತೆ ಸಿಗಬೇಕೆನ್ನುವ ತುಳುನಾಡಿನ ಬಂಧುಗಳ ಹೋರಾಟಕ್ಕೆ ನನ್ನದೂ ಧ್ವನಿ ಇದೆ.ತುಳು ಒಂದು ಭಾಷೆ ಮಾತ್ರವಲ್ಲ,ತುಳು ಒಂದು ಸಂಸ್ಕೃತಿ-ಪರಂಪರೆ.ಅದ್ಭುತ ಇತಿಹಾಸ ಇರುವ ತುಳುನಾಡಿನ ಭಾಷೆಗೆ ಶೀಘ್ರ ವಿಶೇಷ ಮಾನ್ಯತೆ ಸಿಗಬೇಕು ಎನ್ನುವುದು ನನ್ನ ಆಶಯ” ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೂಡಾ ಟ್ವೀಟ್‌ ಮೂಲಕ ಬೆಂಬಲ ಸೂಚಿಸಿದ್ದಾರೆ.

ಪೆದ್ದ್ ತಾಂಕಿದಿನ ಅಪ್ಪೆ ಲೆಕ ಮಟ್ಟೆಲ್ ಡ್ ಮಾನಾಯಿನ ಅಪ್ಪೆ ಬಾಸೆಗ್ ರಾಜ್ಯ ಬಾಸೆದ ಮಾನಾದಿಗೆ ತಿಕ್ಕೊಡು ಪನ್ಪಿನ ಪೊರಂಬಾಟಗ್ ಎನ್ನ ಬೆರಿಸಾಯ ಉಂಡು. ತುಲು ಬಾಸೆನ್ 8ನೇ ಪರಿಚ್ಛೇದಗ್ ಸೇರ್ಪಾವರೆ ಸರಕಾದೊಟ್ಟುಗು ಪಾತೆರಕತೆ ಆವೊಂದುಂಡು.(1)#TuluofficialinKA_KL #ತುಳುನಾಡು #ತುಳುಭಾಷೆ #TuluTo8thSchedule

— Nalinkumar Kateel (@nalinkateel) June 13, 2021

ತುಳು ರಾಜ್ಯದ ಆಡಳಿತಾತ್ಮಕ ಭಾಷೆ ಆಗಬೇಕು,ತುಳುವಿಗೆ ವಿಶೇಷ ಮಾನ್ಯತೆ ಸಿಗಬೇಕೆನ್ನುವ ತುಳುನಾಡಿನ ಬಂಧುಗಳ ಹೋರಾಟಕ್ಕೆ ನನ್ನದೂ ಧ್ವನಿ ಇದೆ.ತುಳು ಒಂದು ಭಾಷೆ ಮಾತ್ರವಲ್ಲ,ತುಳು ಒಂದು ಸಂಸ್ಕೃತಿ-ಪರಂಪರೆ.ಅದ್ಭುತ ಇತಿಹಾಸ ಇರುವ ತುಳುನಾಡಿನ ಭಾಷೆಗೆ ಶೀಘ್ರ ವಿಶೇಷ ಮಾನ್ಯತೆ ಸಿಗಬೇಕು ಎನ್ನುವುದು ನನ್ನ ಆಶಯ.@BSYBJP#TuluOfficialinKA_KL

— Kota Shrinivas Poojari (@KotasBJP) June 13, 2021

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

20 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

20 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

20 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

20 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

20 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

21 hours ago