ಮಂಗಳೂರು : ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ – ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ – ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ

ಮಂಗಳೂರು : ಖಾಸಗಿ ಕಾಲೇಜಿನ ಬಸ್ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿ ಓರ್ವ ಸಾವನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕೂಳೂರು ಸೇತುವೆ ಬಳಿಯ ಕುದುರೆಮುಖ ಜಂಕ್ಷನ್ ಬಳಿ ನಿನ್ನೆ ನಡೆದಿದೆ.

ಮೃತರನ್ನು ಕೃಷ್ಣಾಪುರ 4ನೇ ಬ್ಲಾಕ್‌ ನಿವಾಸಿ ಬಶೀರ್‌(42) ಎಂದು ಗುರುತಿಸಲಾಗಿದ್ದು, ಅವರ ಸಹೋದರ ಆಶ್ರಫ್‌(52) ಗಂಭೀರ ಗಾಯಗೊಂಡಿದ್ದು, ನಗರದ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಶೀರ್‌ ಮತ್ತು ಅವರ ಅಣ್ಣ ಅಶ್ರಫ್‌ ಜೋಕಟ್ಟೆಯಿಂದ ಕುದುರೆಮುಖವಾಗಿ ಕೃಷ್ಣಾಪುರಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಖಾಸಗಿ ಕಾಲೇಜಿನ ಬಸ್‌ ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದಿದ್ದ ವಾಹನ ಸವಾರರ ಮೇಲೆವೇಗವಾಗಿ ಬಂದ ಲಾರಿ ಹರಿಯಿತು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply