ಮಂಗಳೂರು: ನಿಷೇಧಿತ ಪಿಎಫ್ ಐ, ಸಿಎಫ್ ಐ ಕಚೇರಿಗೆ ಬೀಗ ಹಾಕಿದ ಪೊಲೀಸರು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನಿಷೇಧಿತ ಪಿಎಫ್ ಐ, ಸಿಎಫ್ ಐ ಕಚೇರಿಗೆ ಬೀಗ ಹಾಕಿದ ಪೊಲೀಸರು

ಮಂಗಳೂರು: ಕೇಂದ್ರ ಸರಕಾರವು ಪಿಎಫ್‌ಐ ಮತ್ತಿತರ 8 ಸಂಘಟನೆಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 12 ಕಡೆಗಳಲ್ಲಿರುವ ನಿಷೇಧಿತ ಸಂಘಟನೆಯ ಕಚೇರಿಗಳಿಗೆ ಬುಧವಾರ ಪೊಲೀಸರು ಬೀಗ ಜಡಿದಿದ್ದಾರೆ‌.

ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೊಣಾಜೆ, ಮಂಗಳೂರು ಗ್ರಾಮಾಂತರ, ಪಾಂಡೇಶ್ವರ, ಬಂದರ್ ಠಾಣೆ ವ್ಯಾಪ್ತಿಯ ಕಚೇರಿಗಳಿಗೆ ದಾಳಿ ಮಾಡಿ ದಾಖಲೆ ಪತ್ರಗಳು, ಕಂಪ್ಯೂಟರ್ ಸಹಿತ ಇತರ ಸೊತ್ತುಗಳನ್ನು ವಶಕ್ಕೆ ‌ಪಡೆದು ಬೀಗ ಜಡಿಯಲಾಗಿದೆ‌.

ಇದನ್ನೂ ಓದಿ: ಮಂಗಳ ಕಾರ್ಯಗಳಿಂದ ಶುಭ..ನೋಡಿ ಇಂದಿನ ದಿನ ಭವಿಷ್ಯ..ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ನಗರದ ಕಸಬಾ ಬೆಂಗರೆ, ಚೊಕ್ಕಬೆಟ್ಟು, ಕಾಟಿಪಳ್ಳ ಎರಡನೆ ಬ್ಲಾಕ್, ಅಡ್ಡೂರ್, ಕಿನ್ನಿಪದವು, ಕೆ.ಸಿ‌.ರೋಡ್, ಇನೋಳಿ, ಮಲ್ಲೂರು, ಕುದ್ರೋಳಿಯ ಪಿಎಫ್‌ಐ ಮತ್ತು ಬಂದರ್‌ನ ಸಿಎಫ್‌ಐ ಹಾಗೂ ನಗರದ ರಾವ್ ಆಯಂಡ್ ರಾವ್ ಸರ್ಕಲ್ ಬಳಿಯ ಇನ್ಫೋರ್ಮೇಶನ್ ಆಯಂಡ್ ಎಂಪವರ್ಮೆಂಟ್ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉಡುಪಿ: PFI ಸಂಘಟನೆಗೆ ಸೇರಿದ ಕಚೇರಿಗಳಿಗೆ ಬೀಗ ಜಡಿದ ಪೊಲೀಸರು – Vishwanews24

Leave a Reply