ಮಂಗಳೂರು : ಪಾರ್ಕಿಂಗ್ ಮಾಡಿದ್ದ ಕಾರು ಬೆಂಕಿಗಾಹುತಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಪಾರ್ಕಿಂಗ್ ಮಾಡಿದ್ದ ಕಾರು ಬೆಂಕಿಗಾಹುತಿ

ಮಂಗಳೂರು : ಪಾರ್ಕಿಂಗ್ ಮಾಡಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರು ಬಲ್ಮಠ ಜ್ಯೂಸ್‌ ಜಂಕ್ಷನ್‌ ಮುಂಭಾಗದಲ್ಲಿ ನಡೆದಿದೆ.

ಪಾರ್ಕಿಂಗ್ ಮಾಡಿದ್ದ ಫೋರ್ಡ್‌ ಕಂಪೆನಿಯ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಬಹುತೇಕ ಸುಟ್ಟು ಹೋಗಿದೆ. ಕಾರಿನ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಬೆಂಕಿ ಹಿಡಿದ ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ನೀರು ಹಾಕಿ ಪ್ರಯತ್ನಿಸಿದ್ದಾರೆ. ಸ್ಥಳದಲ್ಲಿ ದಟ್ಟವಾದ ಹೊಗೆ ಕೂಡಾ ಆವರಿಸಿದ್ದು, ಆತಂಕದ ವಾತಾವರಣ ಉಂಟಾಗಿತ್ತು. ಟ್ರಾಫಿಕ್‌ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭ ರಸ್ತೆ ಸಂಚಾರ ಕೊಂಚ ಹೊತ್ತು ಅಸ್ತವ್ಯಸ್ಥಗೊಂಡಿತು.

ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ  – Vishwanews24

Leave a Reply