ಮಂಗಳೂರು: ಒಂದು ದಿನವೂ ತಪ್ಪದೇ ಪ್ರತಿ ದಿನ ಮೂಕ ಪ್ರಾಣಿಗಳ ಸಂರಕ್ಷಣೆ ಮಾಡುತ್ತಿರುವ ಮಂಗಳೂರಿನ ಈ ಮಹಾತಾಯಿಯ ಹೆಸರು ರಜನಿ ಶೆಟ್ಟಿ. ಆಪತ್ತಿಗೊಳಗಾದ ಪ್ರಾಣಿಗಳ ರಕ್ಷಣೆ ಮಾಡುವ, ಬೀದಿ ನಾಯಿಗಳಿಗೆ ಪ್ರತೀ ದಿನ ಆಹಾರ ನೀಡುವ ಮಂಗಳೂರಿನ ರಜನಿ ಅವರ ಸೇವೆಯನ್ನು ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಅವರು ಪ್ರಸಂಶಿಸಿದ್ದಾರೆ.
ತಾನು ಬಾಡಿಗೆ ಮನೆಯಲ್ಲಿದ್ದು ಸಂಕಷ್ಟದ ಜೀವನ ಮಾಡುತ್ತಿದ್ದರೂ, ಪ್ರತಿದಿನ 600 ಬೀದಿನಾಯಿಗಳಿಗೆ ಅನ್ನ ಬಡಿಸುತ್ತಾರೆ. ಈಕೆಯ ವಾಹನದ ಸದ್ದು ಕೇಳಿದರೆ ಸಾಕು ಆಕಳು ಹಸಿವಿನಿಂದ ಹಾಲಿಗಾಗಿ ತಾಯಿಯ ಬಳಿ ಓಡಿ ಬರುವಂತೆ ಎಲ್ಲಾ ಶ್ವಾನಗಳು ಬಂದು ಆಕೆಯನ್ನು ಸುತ್ತುವರಿಯುತ್ತವೆ.
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಜನಿ ಶೆಟ್ಟಿ ಅವರ ಫೋಟೊ ಸಹಿತ ಪೋಸ್ಟ್ ಮಾಡಿರುವ ಲಕ್ಷ್ಮಣ್ ಅವರು, ಮಂಗಳೂರಿನ ರಜನಿ ಅವರು ನೂರಾರು ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.
ಪ್ರಾಣಿಗಳು ಒಂದು ವೇಳೆ ಆಪತ್ತಿಗೆ ಒಳಗಾದರೆ ಅವುಗಳ ರಕ್ಷಣೆಗೂ ಅವರು ಧಾವಿಸುತ್ತಾರೆ.ಪ್ರಾಣಿಗಳು ಒಂದೊಮ್ಮೆ ಬಾವಿಗೆ ಬಿದ್ದರೆ ಬಾವಿಗಳಿದು ಪ್ರಾಣಿಗಳ ರಕ್ಷಣೆ ಮಾಡುತ್ತಿದ್ದಾರೆ. ಅವರ ಸೇವೆಗೆ ಭೇಷ್ ಎನ್ನಲೇಬೇಕುಎಂದು ಟ್ವೀಟ್ ಮಾಡಿದ್ದಾರೆ.
ತಾನು ಊಟ ಮಾಡದಿದ್ದರೂ ಶ್ವಾನಗಳು ಹಸಿವಿನಿಂದ ಇರದ ಹಾಗೆ ರಜನಿ ಶೆಟ್ಟಿ ನೋಡಿಕೊಂಡಿದ್ದಾರೆ. ಹುಷಾರಿಲ್ಲದ ಸಂದರ್ಭದಲ್ಲೂ ತನ್ನ ಶ್ವಾನ ಸೇವೆಯನ್ನು ರಜನಿ ಶೆಟ್ಟಿ ಬಿಟ್ಟಿಲ್ಲ. ಒಂದು ದಿನ ಹೋಗದಿದ್ದರೆ ಶ್ವಾನಗಳು ದಾರಿ ಕಾಯುತ್ತಿರುತ್ತವೆ ಅಂತಾ ಹೇಳುತ್ತಾರೆ ರಜನಿ ಶೆಟ್ಟಿ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…