ಮಂಗಳೂರು: ಪ್ರತಿದಿನ 600 ಬೀದಿ ನಾಯಿಗಳನ್ನು ಪೋಷಿಸುವ ರಜನಿ ಶೆಟ್ಟಿಯ ಪ್ರಾಣಿ ಸೇವೆಗೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಮೆಚ್ಚುಗೆ  – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಪ್ರತಿದಿನ 600 ಬೀದಿ ನಾಯಿಗಳನ್ನು ಪೋಷಿಸುವ ರಜನಿ ಶೆಟ್ಟಿಪ್ರಾಣಿ ಸೇವೆಗೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಮೆಚ್ಚುಗೆ  – Vishwanews24

ಮಂಗಳೂರು: ಒಂದು ದಿನವೂ ತಪ್ಪದೇ ಪ್ರತಿ ದಿನ ಮೂಕ ಪ್ರಾಣಿಗಳ ಸಂರಕ್ಷಣೆ ಮಾಡುತ್ತಿರುವ ಮಂಗಳೂರಿನ ಈ ಮಹಾತಾಯಿಯ ಹೆಸರು ರಜನಿ ಶೆಟ್ಟಿ. ಆಪತ್ತಿಗೊಳಗಾದ ಪ್ರಾಣಿಗಳ ರಕ್ಷಣೆ ಮಾಡುವ, ಬೀದಿ ನಾಯಿಗಳಿಗೆ ಪ್ರತೀ ದಿನ ಆಹಾರ ನೀಡುವ ಮಂಗಳೂರಿನ ರಜನಿ ಅವರ ಸೇವೆಯನ್ನು ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಅವರು ಪ್ರಸಂಶಿಸಿದ್ದಾರೆ.

ತಾನು ಬಾಡಿಗೆ ಮನೆಯಲ್ಲಿದ್ದು ಸಂಕಷ್ಟದ ಜೀವನ ಮಾಡುತ್ತಿದ್ದರೂ, ಪ್ರತಿದಿನ 600 ಬೀದಿನಾಯಿಗಳಿಗೆ ಅನ್ನ ಬಡಿಸುತ್ತಾರೆ. ಈಕೆಯ ವಾಹನದ ಸದ್ದು ಕೇಳಿದರೆ ಸಾಕು ಆಕಳು ಹಸಿವಿನಿಂದ ಹಾಲಿಗಾಗಿ ತಾಯಿಯ ಬಳಿ ಓಡಿ ಬರುವಂತೆ ಎಲ್ಲಾ ಶ್ವಾನಗಳು ಬಂದು ಆಕೆಯನ್ನು ಸುತ್ತುವರಿಯುತ್ತವೆ.

ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ

ರಜನಿ ಶೆಟ್ಟಿಯವರ ಈ ಸಾಧನೆಗೆ ಮತ್ತು ಮಾತೃ ಹೃದಯಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿ ಶೆಟ್ಟಿಯವರ ಸಾಧನೆಗಾಥೆಯನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ ಲಕ್ಷ್ಮಣ್, ಮಂಗಳೂರು ಮೂಲದ ರಜನಿ ಶೆಟ್ಟಿ ಪ್ರತಿ ದಿನ ಸ್ವತಃ ಅಡಿಗೆ ಮಾಡಿ ನೂರಾರು ಪ್ರಾಣಿಗಳಿಗೆ ಆಹಾರ ನೀಡುತ್ತಾರೆ. ಬಾವಿಗಳಿಗೆ ಪ್ರಾಣಿಗಳು ಬಿದ್ದರೆ ಬಾವಿಗಿಳಿದು ರಕ್ಷಣೆ ಮಾಡುತ್ತಾರೆ. ಅನಾರೋಗ್ಯ ಹೊಂದಿದ, ಗಾಯಗೊಂಡ ಬೀದಿ ನಾಯಿಗಳಿಗೆ ಆರೈಕೆ ಮಾಡುತ್ತಾರೆ. ರಜನಿ ಶೆಟ್ಟಿಯವರ ಅದ್ಭುತ ಸೇವೆಗೆ ತಲೆ ಬಾಗುತ್ತೇನೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ರಜನಿ ಶೆಟ್ಟಿ ಅವರ ಫೋಟೊ ಸಹಿತ ಪೋಸ್ಟ್‌ ಮಾಡಿರುವ ಲಕ್ಷ್ಮಣ್‌ ಅವರು, ಮಂಗಳೂರಿನ ರಜನಿ ಅವರು ನೂರಾರು ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.

ಪ್ರಾಣಿಗಳು ಒಂದು ವೇಳೆ ಆಪತ್ತಿಗೆ ಒಳಗಾದರೆ ಅವುಗಳ ರಕ್ಷಣೆಗೂ ಅವರು ಧಾವಿಸುತ್ತಾರೆ.ಪ್ರಾಣಿಗಳು ಒಂದೊಮ್ಮೆ ಬಾವಿಗೆ ಬಿದ್ದರೆ ಬಾವಿಗಳಿದು ಪ್ರಾಣಿಗಳ ರಕ್ಷಣೆ ಮಾಡುತ್ತಿದ್ದಾರೆ. ಅವರ ಸೇವೆಗೆ ಭೇಷ್‌ ಎನ್ನಲೇಬೇಕುಎಂದು ಟ್ವೀಟ್‌ ಮಾಡಿದ್ದಾರೆ.

ತಾನು ಊಟ ಮಾಡದಿದ್ದರೂ ಶ್ವಾನಗಳು ಹಸಿವಿನಿಂದ ಇರದ ಹಾಗೆ ರಜನಿ ಶೆಟ್ಟಿ ನೋಡಿಕೊಂಡಿದ್ದಾರೆ. ಹುಷಾರಿಲ್ಲದ ಸಂದರ್ಭದಲ್ಲೂ ತನ್ನ ಶ್ವಾನ ಸೇವೆಯನ್ನು ರಜನಿ ಶೆಟ್ಟಿ ಬಿಟ್ಟಿಲ್ಲ. ಒಂದು ದಿನ ಹೋಗದಿದ್ದರೆ ಶ್ವಾನಗಳು ದಾರಿ ಕಾಯುತ್ತಿರುತ್ತವೆ ಅಂತಾ ಹೇಳುತ್ತಾರೆ ರಜನಿ ಶೆಟ್ಟಿ.

ಡಿ.13ಕ್ಕೆ ಎಚ್‌ ಡಿ ದೇವೇಗೌಡರ ಬಹುನಿರೀಕ್ಷಿತ ಆತ್ಮ ಚರಿತ್ರೆ ಕುರಿತ ಪುಸ್ತಕ ಬಿಡುಗಡೆ -Vishwanews24