ಮಂಗಳೂರು : ಸರಕಾರಿ ಬಸ್ ಸೇರಿದಂತೆ, ಖಾಸಗಿ ಬಸ್ಸುಗಳ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು, ಶಾಲಾ ವಾಹನಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು, ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ಋಷ್ಯಂತ್ ಎಚ್ಚರಿಕೆ ನೀಡಿದ್ದಾರೆ.
ಎಸ್‌ಸಿ/ಎಸ್‌ಟಿ ಕುಂದುಕೊರತೆ ಆಲಿಕೆ ಸಭೆಯಲ್ಲಿ ದಲಿತ ಮುಖಂಡರ ದೂರಿನ ಮೇರೆಗೆ ಈ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ಠಾಣಾ ವ್ಯಾಪ್ತಿಯಿಂದ ಈ ನಿಟ್ಟಿನಲ್ಲಿ ದಾಖಲಿಸಿದ ಪ್ರಕರಣಗಳ ವರದಿಯನ್ನು ಡಿ. 25ರೊಳಗೆ ನನಗೆ ಒದಗಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆನಿರ್ದೇಶನ ನೀಡಿದ್ದಾರೆ.
ದಲಿತ ನಾಯಕಿ ಈಶ್ವರಿ ಅವರು ವಿಷಯ ಪ್ರಸ್ತಾಪಿಸಿ, ಬೆಳ್ತಂಗಡಿ ಭಾಗದಲ್ಲಿ ಸರಕಾರಿ ಬಸ್ಸಿನಲ್ಲಿ ಫುಟ್‌ಬೋರ್ಡ್‌ನಲ್ಲಿ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುವ ಪರಿಸ್ಥಿತಿ ಇದೆ. ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಆಗಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಪೊಲೀಸ್ ಇಲಾಖೆಯಿಂದ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …
ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್ ವಿತರಣೆ ಮಂಗಳೂರು: ತಡೆಗೋಡೆ…
ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…
ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಜು.6 ಕ್ಕೆ ಬೆಳಗಾವಿಗೆ…
ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಅಹಮದಾಬಾದ್: ಕೇವಲ…
ಪಾನ್ ಮಸಾಲಾ, ಗುಟ್ಕಾ ಮಾರಾಟ ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ: ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ ಬೆಂಗಳೂರು:…